ಬೆಂಗಳೂರು: ಡಿಕೆ ಶಿವಕುಮಾರ್ ಮುಖ್ಯಮಂತ್ರಿಯಾಗುತ್ತಾರಾ ಅಥವಾ ಸಿದ್ದರಾಮಯ್ಯನವರೇ ಮುಂದುವರಿಯುತ್ತಾರಾ ಎಂಬ ಕುತೂಹಲಕ್ಕೆ ಕೊನೆಯ ಮುದ್ರೆ ಒತ್ತುವವರು ಯಾರು ಗೊತ್ತಾ?
ಕಾಂಗ್ರೆಸ್ ನಲ್ಲಿ ಈಗ ಕುರ್ಚಿ ಫೈಟ್ ಜೋರಾಗಿದೆ. ಡಿಕೆ ಶಿವಕುಮಾರ್ ಬಣ ಪಟ್ಟು ಬಿಡುತ್ತಿಲ್ಲ. ಸಿಎಂ ಸಿದ್ದರಾಮಯ್ಯ ಕುರ್ಚಿ ಬಿಟ್ಟುಕೊಡುತ್ತಿಲ್ಲ. ಇದರ ನಡುವೆ ಮಲ್ಲಿಕಾರ್ಜುನ ಖರ್ಗೆ ರಾಜ್ಯದ ನಾಯಕರೊಂದಿಗೆ ಮಾತುಕತೆ ನಡೆಸಿ ದೆಹಲಿಗೆ ವರದಿ ಒಪ್ಪಿಸಲಿದ್ದಾರೆ.
ಇದೀಗ ಡಿಕೆ ಶಿವಕುಮಾರ್ ಭವಿಷ್ಯ ಇರೋದು ರಾಹುಲ್ ಗಾಂಧಿ ಮತ್ತು ಸೋನಿಯಾ ಗಾಂಧಿ ಕೈಯಲ್ಲಿ. ಅದರಲ್ಲೂ ರಾಹುಲ್ ಗಾಂಧಿ ಸಿಎಂ ಬದಲಾವಣೆ ಬಗ್ಗೆ ಅಂತಿಮ ನಿರ್ಧಾರ ತೆಗೆದುಕೊಳ್ಳಲಿದ್ದಾರೆ. ನಾಳೆ ರಾಹುಲ್ ಜೊತೆಗೆ ಮಲ್ಲಿಕಾರ್ಜುನ ಖರ್ಗೆ ಮಾತುಕತೆ ನಡೆಸಲಿದ್ದಾರೆ.
ಈಗಾಗಲೇ ಸಿದ್ದರಾಮಯ್ಯ ಹೈಕಮಾಂಡ್ ಹೇಳಿದ್ರೆ ಮುಂದುವರಿಯುತ್ತೇನೆ, ಇಲ್ಲದೇ ಹೋದರೆ ಹೈಕಮಾಂಡ್ ತೀರ್ಮಾನದಂತೆ ನಡೆದುಕೊಳ್ಳುತ್ತೇನೆ ಎಂದಿದ್ದಾರೆ. ಹೀಗಾಗಿ ನಾಳೆ ರಾಹುಲ್ ಗಾಂಧಿ ತೀರ್ಮಾನ ಏನಿರುತ್ತದೆ ಎಂಬ ಬಗ್ಗೆ ಕುತೂಹಲವಿದೆ.