ಬೆಂಗಳೂರು: ನ್ಯಾಷನಲ್ ಹೆರಾಲ್ಡ್ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ನಾಟಕದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಮತ್ತೆ ಸಂಕಷ್ಟವೊಂದು ಎದುರಾಗಿದೆ. ದೆಹಲಿ ಪೊಲೀಸರು ಶಿವಕುಮಾರ್ ಅವರಿಗೆ ಹಣಕಾಸು ವಿನಿಮಯದ ಮಾಹಿತಿಗಳನ್ನು ಕೇಳಿ ನೋಟಿಸ್ ಜಾರಿ ಮಾಡಿದ್ದಾರೆ.
ಶಿವಕುಮಾರ್ ಅವರಿಗೆ ದೆಹಲಿ ಪೊಲೀಸರ ಆರ್ಥಿಕ ಅಪರಾಧಗಳ ವಿಭಾಗ ನ.29ರಂದು ಈ ನೋಟಿಸ್ ಕಳಿಸಿದೆ. ಅದರಲ್ಲಿ, ಡಿ.19ರ ಒಳಗೆ ಹಾಜರಾಗಿ ವೈಯಕ್ತಿಕ ಹಿನ್ನೆಲೆ, ಕಾಂಗ್ರೆಸ್ ಪಕ್ಷದೊಂದಿಗಿನ ಒಡನಾಟ, ಅವರು ಅಥವಾ ಅವರಿಗೆ ಸೇರಿದ ಸಂಸ್ಥೆಗಳಿಂದ ಯಂಗ್ ಇಂಡಿಯಾಗೆ ವರ್ಗಾವಣೆಯಾದ ಹಣದ ಬಗ್ಗೆ ಮಾಹಿತಿ ನೀಡಲು ಸೂಚಿಸಲಾಗಿದೆ.
ಹಣಕಾಸು ವ್ಯವಹಾರಕ್ಕೆ ಸಂಬಂಧಿಸಿದ ಆದಾಯ ತೆರಿಗೆ ದಾಖಲೆ, ಹಣಕಾಸು ಹೇಳಿಕೆ ಮತ್ತು ದೇಣಿಗೆಯ ಪ್ರಮಾಣಪತ್ರಗಳನ್ನೂ ಸಲ್ಲಿಸುವಂತೆ ಸೂಚಿಸಿದೆ.
ಪೊಲೀಸರ ಈ ನೋಟಿಸ್‌ಗೆ ಕಾಂಗ್ರೆಸ್ ಆಕ್ಷೇಪ ವ್ಯಕ್ತೊಡಿಸಿದೆ. ಬಿಜೆಪಿಗೆ ಸಹಕಾರ ತೋರದಿದ್ದಕ್ಕೆ ಶಿವಕುಮಾರ್‌ರನ್ನು ಟಾರ್ಗೆಟ್ ಮಾಡಲಾಗುತ್ತಿದೆ. ಪಕ್ಷದ ನಾಯಕರ ಪೈಕಿ ಅವರನ್ನೇ ಹೆಚ್ಚು ಕಿರುಕಿಳ ನೀಡಲಾಗುತ್ತಿದೆ. ಆದರೆ ಅವರು ಯಾವುದಕ್ಕೂ ಮಣಿಯುವುದಿಲ್ಲ ಎಂದಿದೆ.