ಬೆಂಗಳೂರು: ವಿರಾಟ್ ಕೊಹ್ಲಿ ಫೀಲ್ಡ್‌ನಲ್ಲಿದ್ದರೆ ಒಂದು ನಗು, ಕೋಪ ಹಾಗೂ ಸಂಭ್ರಮಕ್ಕೆ ಯಾವತ್ತೂ ಕಮ್ಮಿಯಿರುವುದಿಲ್ಲ. ಯಾವಾಗಲೂ ತಮ್ಮ ಸಹ ಆಟಗಾರರ ಜತೆ ನಡೆಯುವ ಹಾಸ್ಯಕರ ಘಟನೆಯನ್ನು ಮತ್ತೇ ಮತ್ತೇ ಅನುಕರಣೆ ಮಾಡುವ ಮೂಲಕ ವಿರಾಟ್ ಎಲ್ಲರ ಮುಖದಲ್ಲೂ ನಗು ತರಿಸುತ್ತಾರೆ.
ಒಟ್ಟಾರೆ ಕೊಹ್ಲಿ ಮೈದಾನದಲ್ಲಿದ್ದರೆ ಮನರಂಜನೆಗೇನೂ ಕೊರತೆಯಿರುವುದಿಲ್ಲ.
ಕಿಂಗ್ ಒಂದು ಎದುರಾಳಿಗಳನ್ನೂ ಕೆಣಕುತ್ತಾರೆ ಇಲ್ಲದಿದ್ದರೆ ತಮ್ಮ ಸಹ ಆಟಗಾರರ ಕಾಲೆಳೆದು ಪ್ರೇಕ್ಷಕರಿಗೆ ಮನರಂಜನೆಯನ್ನು ನೀಡುತ್ತಾರೆ.
ಇಂದು ದಕ್ಷಿಣ ಆಫ್ರಿಕಾ ವಿರುದ್ಧ ನಡೆದ ಏಕದಿನ ಪಂದ್ಯಾಟದಲ್ಲೂ ವಿರಾಟ್ ಅವರು ತಮ್ಮ ತಮ್ಮ ಹಾಸ್ಯ ನಡೆಯ ಮೂಲಕ ಇಂಟರ್‌ನೆಟ್‌ನಲ್ಲಿ ಸದ್ದು ಮಾಡುತ್ತಿದ್ದಾರೆ.
ತಮ್ಮ ಬೌಲಿಂಗ್‌ನಿಂದ ಕುಲ್‌ದೀಪ್ ಯಾದವ್ ಅವರು ದಕ್ಷಿಣ ಆಫ್ರಿಕಾದ ಮೂರನೇ ವಿರಾಟ್ ಪಡೆದಾಗ ಕೊಹ್ಲಿ ಮೆಚ್ಚುಗೆ ವ್ಯಕ್ತಪಡಿಸುತ್ತಾರೆ. ಈ ಸಂದರ್ಭದಲ್ಲಿ ಕುಲ್‌ದೀಪ್ ಸೊಂಟ ಹಿಡಿದು ಕೊಹ್ಲಿ ಜೋಡಿ ಡ್ಯಾನ್ಸ್ ಮಾಡುತ್ತಾರೆ. ಇವರಿಬ್ಬರ ಸ್ವಾರಸ್ಯಕರ ವೈರಲ್ ಡ್ಯಾನ್ಸ್ ಇದೀಗ ಇಂಟರ್‌ನೆಟ್‌ನಲ್ಲಿ ಸದ್ದು ಮಾಡುತ್ತಿದೆ.