Publish Date: Sat, 06 Dec 2025 (13:34 IST)
Updated Date: Sat, 06 Dec 2025 (13:36 IST)
ವಿಶಾಖಪಟ್ಟಣಂ: ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಮೂರನೇ ಏಕದಿನ ಪಂದ್ಯದಲ್ಲಿ ಕೊನೆಗೂ ಟೀಂ ಇಂಡಿಯಾ ಟಾಸ್ ಗೆದ್ದಿದೆ. ಟಾಸ್ ಗೆದ್ದ ಖುಷಿಯಲ್ಲಿ ನಾಯಕ ಕೆಎಲ್ ರಾಹುಲ್ ಸಂಭ್ರಮಿಸಿದ್ದಾರೆ. ಟಾಸ್ ಗೆದ್ದ ಟೀಂ ಇಂಡಿಯಾ ಮೊದಲು ಫೀಲ್ಡಿಂಗ್ ಆಯ್ದುಕೊಂಡಿದೆ.
ಕಳೆದ ಹಲವು ಸಮಯದಿಂದ ನಾಯಕ ಯಾರೇ ಆಗಿರಲಿ, ಫಾರ್ಮ್ಯಾಟ್ ಯಾವುದೇ ಆಗಿರಲಿ. ಟೀಂ ಇಂಡಿಯಾ ಟಾಸ್ ಗೆಲ್ಲುತ್ತಲೇ ಇರಲಿಲ್ಲ. ಏಕದಿನ ಪಂದ್ಯದಲ್ಲಿ ಇದು ಎರಡು ವರ್ಷಗಳ ಬಳಿಕ ಟೀಂ ಇಂಡಿಯಾ ಟಾಸ್ ಗೆದ್ದಿದೆ! ಇಬ್ಬನಿ ಪ್ರಮುಖ ಪಾತ್ರ ವಹಿಸಲಿರುವುದರಿಂದ ಮೊದಲು ಬೌಲಿಂಗ್ ಮಾಡುವುದಾಗಿ ನಾಯಕ ಕೆಎಲ್ ರಾಹುಲ್ ಹೇಳಿದ್ದಾರೆ.
ಈ ಪಂದ್ಯಕ್ಕೆ ಟೀಂ ಇಂಡಿಯಾ ಒಂದು ಬದಲಾವಣೆ ಮಾಡಿಕೊಂಡಿದೆ. ವಾಷಿಂಗ್ಟನ್ ಸುಂದರ್ ಬದಲಿಗೆ ತಿಲಕ್ ವರ್ಮಗೆ ಅವಕಾಶ ನೀಡಿದೆ. ಆದರೆ ಕಳೆದ ಪಂದ್ಯದಲ್ಲಿ ದುಬಾರಿಯಾಗಿದ್ದರೂ ಪ್ರಸಿದ್ಧ ಕೃಷ್ಣಗೆ ಮತ್ತೊಂದು ಅವಕಾಶ ನೀಡಿದೆ. ಅತ್ತ ದಕ್ಷಿಣ ಆಫ್ರಿಕಾ ರಿಕಲ್ಟನ್ ಮತ್ತು ಬಾರ್ಟ್ ಮನ್ ಗೆ ಅವಕಾಶ ನೀಡಿದೆ.