Select Your Language

Notifications

webdunia
webdunia
webdunia
webdunia

ವಿರಾಟ್ ಕೊಹ್ಲಿಯಲ್ಲಿ ಆಗಿದೆ ಈ ಒಂದು ಬದಲಾವಣೆ

Virat Kohli

Krishnaveni K

ಮುಂಬೈ , ಶುಕ್ರವಾರ, 5 ಡಿಸೆಂಬರ್ 2025 (11:07 IST)
ಮುಂಬೈ: ಟೀಂ ಇಂಡಿಯಾ ಸ್ಟಾರ್ ಕ್ರಿಕೆಟಿಗ ವಿರಾಟ್ ಕೊಹ್ಲಿಯಲ್ಲಿ ದಕ್ಷಿಣ ಆಫ್ರಿಕಾ ಸರಣಿ ಆರಂಭವಾದಾಗಿನಿಂದ ಈ ಒಂದು ಬದಲಾವಣೆಯಾಗಿದೆ. ಅದೇನು ಗೊತ್ತಾ?

ವಿರಾಟ್ ಕೊಹ್ಲಿ ಎಂದರೆ ಮೈದಾನದಲ್ಲಿ ಆಕ್ರಮಣಕಾರೀ ವರ್ತನೆ ಮೂಲಕವೇ ಫೇಮಸ್ ಆಗಿದ್ದವರು. ಅವರನ್ನು ಕೆಣಕಿದಷ್ಟು ಆಟದಲ್ಲಿ ಮತ್ತು ವರ್ನತೆಯಲ್ಲಿ ತಿರುಗೇಟು ಕೊಡುವ ಅಗ್ರೆಸಿವ್ ಆಟಗಾರ ಕೊಹ್ಲಿ. ಆರಂಭದ ದಿನಗಳಲ್ಲಿ ಕೊಹ್ಲಿಯ ಅಗ್ರೆಷನ್ ನೋಡುವಾಗ ಕೆಲವರಿಗೆ ಅತಿರೇಕ ಎನಿಸಿದ್ದೂ ಇದೆ.

ಆದರೆ ಕೊಹ್ಲಿಯನ್ನು ಇದೇ ಕಾರಣಕ್ಕೆ ಅಭಿಮಾನಿಗಳು ಇಷ್ಟಪಡೋದು. ಟೆಸ್ಟ್ ಕ್ರಿಕೆಟ್ ನಲ್ಲೂ ಅವರು ಸಕ್ಸಸ್ ಕಂಡಿದ್ದು ಇದೇ ಕಾರಣಕ್ಕೆ ಎನ್ನುವವರಿದ್ದಾರೆ. ಆದರೆ ಕಳೆದ ಎರಡು ವರ್ಷಗಳಲ್ಲಿ ಅವರು ಕೂಲ್ ಆಗಿದ್ದರು. ಶತಕ ಸಿಡಿಸಿದರೂ ತಣ್ಣನೆಯ ಸೆಲೆಬ್ರೇಷನ್ ಇರುತ್ತಿತ್ತು.

ಎಂದಿನ ಅರಚಾಟ, ಕಿರುಚಾಟಗಳೆಲ್ಲಾ ಕಡಿಮೆಯಾಗಿತ್ತು. ವಯಸ್ಸಾಗುತ್ತಿದ್ದಂತೇ ವ್ಯಕ್ತಿ ಮಾಗಿದ್ದಾನೆ ಎಂದು ಎಂದುಕೊಂಡವರಿದ್ದರು. ಆದರೆ ಈಗ ದಕ್ಷಿಣ ಆಫ್ರಿಕಾ ಸರಣಿಯನ್ನು ನೋಡುತ್ತಿದ್ದರೆ ಹಳೆಯ ಕೊಹ್ಲಿ ನೆನಪಾಗುತ್ತಾರೆ. ಕೊಹ್ಲಿ ಬದಲಾಗಿದ್ದು, ಮತ್ತೆ ತಮ್ಮ ಹಳೆಯ ದಿನಗಳನ್ನು ನೆನಪಿಸುವಂತೆ ಆಕ್ರಮಣಕಾರೀ ಮನೋಭಾವವನ್ನು ಆಟದಲ್ಲಿ ಮತ್ತು ವರ್ತನೆಯಲ್ಲಿ ತೋರುತ್ತಿದ್ದಾರೆ. ಇದು ಅಭಿಮಾನಿಗಳಿಗೆ ಇಷ್ಟವಾಗುತ್ತಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಮೊಹಮ್ಮದ್ ಶಮಿ ಎಲ್ಲಿ; ಅಜಿತ್ ಅಗರ್ಕರ್ ವಿರುದ್ಧ ಮುಗಿಬಿದ್ದ ಮಾಜಿ ಆಟಗಾರರು