ರಾಯ್ಪುರ: ಮೈದಾನದಲ್ಲಿ ವಿರಾಟ್ ಕೊಹ್ಲಿ ಮಿಮಿಕ್ರಿ ಮಾಡುವುದು ಹೊಸದೇನಲ್ಲ. ನಿನ್ನೆ ದಕ್ಷಿಣ ಆಫ್ರಿಕಾ ವಿರುದ್ಧದ ಎರಡನೇ ಏಕದಿನ ಪಂದ್ಯದ ವೇಳೆ ಕೊಹ್ಲಿ ಮಿಮಿಕ್ರಿಗೆ ರೋಹಿತ್ ಶರ್ಮಾಗೆ ನಗುವೋ ನಗು. ಈ ವಿಡಿಯೋ ಇಲ್ಲಿದೆ ನೋಡಿ.
ಕೊಹ್ಲಿ ಮೈದಾನದಲ್ಲಿದ್ದರೆ ಮನರಂಜನೆಗೇನೂ ಕೊರತೆಯಿರುವುದಿಲ್ಲ. ಒಂದೋ ಎದುರಾಳಿಗಳನ್ನು ಕೆಣಕುವುದು ಇಲ್ಲವೇ ಸಹ ಆಟಗಾರರ ಕಾಲೆಳೆಯುವುದು. ಅದೂ ಇಲ್ಲದೇ ಹೋದರೆ ಪ್ರೇಕ್ಷಕರ ಜೊತೆ ಸಂವಹನ ಮಾಡುವ ಮೂಲಕ ಕೊಹ್ಲಿ ಮನರಂಜಿಸುತ್ತಾರೆ.
ನಿನ್ನೆಯ ಪಂದ್ಯದಲ್ಲಿ ಅಂತಹದ್ದೇ ಘಟನೆ ನಡೆದಿದೆ. ಎದುರಾಳಿ ಬ್ಯಾಟಿಗ ಬ್ರಿಝ್ಕೆ ಕ್ರೀಸ್ ನಲ್ಲಿ ಬ್ಯಾಟಿಂಗ್ ಗೆ ನಿಲ್ಲುವುದನ್ನು ಕೊಹ್ಲಿ ಅನುಕರಿಸಿದ್ದಾರೆ. ಚಿಕ್ಕಮಕ್ಕಳಂತೆ ಅವರು ಕುಣಿದಾಡುವುದನ್ನು ನೋಡಿದ ರೋಹಿತ್ ಶರ್ಮಾಗೆ ನಗು ತಡೆಯಲಾಗಲಿಲ್ಲ.
ಇನ್ನು ಪಕ್ಕದಲ್ಲೇ ಇದ್ದ ಕುಲದೀಪ್ ಯಾದವ್ ಕೂಡಾ ಜೋರಾಗಿ ನಕ್ಕಿದ್ದಾರೆ. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ವೈರಲ್ ಆಗಿದ್ದು, ಕೊಹ್ಲಿ ಥೇಟ್ ಮಗುವಿನಂತೆ ಎಂದು ಕಾಮೆಂಟ್ ಮಾಡಿದ್ದಾರೆ.