ರಾಯ್ಪುರ: ಪ್ರಸಿದ್ಧ ಕೃಷ್ಣ ಟೀಂ ಇಂಡಿಯಾದ ರನ್ ಮೆಷಿನ್. ಈತನನ್ನು ಪ್ರಮುಖ ಬೌಲರ್ ಅಂತ ಹೇಗೆ ಟೀಂನಲ್ಲಿ ಇಟ್ಕೊಂಡಿದ್ದಾರೆ ಎಂದು ಫ್ಯಾನ್ಸ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ದ್ವಿತೀಯ ಏಕದಿನ ಪಂದ್ಯದಲ್ಲಿ 358 ರನ್ ಗಳಿಸಿಯೂ ಭಾರತ ಸೋತಿದೆ. 40 ಓವರ್ ವರೆಗೂ ಪಂದ್ಯ ಭಾರತದ ಕೈಯಲ್ಲೇ ಇತ್ತು. ಆದರೆ ಡೆತ್ ಓವರ್ ನಲ್ಲಿ ರನ್ ಕಂಟ್ರೋಲ್ ಮಾಡಲಾಗದೇ ಭಾರತ ಸೋತಿದೆ.
ಅದರಲ್ಲೂ ಕನ್ನಡಿಗ ಬೌಲರ್ ಪ್ರಸಿದ್ಧ ಕೃಷ್ಣ ಎಲ್ಲರಿಗಿಂತ ದುಬಾರಿಯಾಗಿದ್ದರು. 8.2 ಓವರ್ ಗಳಲ್ಲಿ ಅವರು ಬರೋಬ್ಬರಿ 85 ರನ್ ನೀಡಿದ್ದರು! ಇದಕ್ಕೆ ನೆಟ್ಟಿಗರಿಂದ ಅವರು ತೀವ್ರ ಟೀಕೆಗೆ ಗುರಿಯಾಗಿದ್ದಾರೆ. ಇಂತಹ ಬೌಲರ್ ಗಳನ್ನು ಕಟ್ಟಿಕೊಂಡು ಟೀಂ ಇಂಡಿಯಾ ಗೆಲ್ಲಲು ಸಾಧ್ಯವೇ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅಲ್ಲದೆ, ಗಂಭೀರ್-ಅಜಿತ್ ಅಗರ್ಕರ್ ಬಂದ ಮೇಲೆ ಟೀಂ ಇಂಡಿಯಾಕ್ಕೆ ಮೊಹಮ್ಮದ್ ಶಮಿಯನ್ನು ಪರಿಗಣಿಸುತ್ತಲೇ ಇಲ್ಲ. 2023 ರ ಏಕದಿನ ವಿಶ್ವಕಪ್ ಹೀರೋ ಬೌಲರ್ ಅನುಪಸ್ಥಿತಿ ಭಾರತಕ್ಕೆ ಪದೇ ಪದೇ ಕಾಡುತ್ತಿದೆ. ಹಾಗಿದ್ದರೂ ಅವರನ್ನು ಕಡೆಗಣಿಸಲಾಗುತ್ತಿದೆ. ಮೊಹಮ್ಮದ್ ಸಿರಾಜ್ ಗೆ ಗಾಯದ ನೆಪವೊಡ್ಡಿ ಗೇಟ್ ಪಾಸ್ ನೀಡಲಾಗಿದೆ. ಜಸ್ಪ್ರೀತ್ ಬುಮ್ರಾಗೆ ವಿಶ್ರಾಂತಿ ನೀಡಲಾಗಿದೆ. ಡೆತ್ ಓವರ್ ಸ್ಪೆಷಲಿಸ್ಟ್ ಗಳಿಲ್ಲದೇ 350 ಪ್ಲಸ್ ರನ್ ಗಳಿಸಿಯೂ ಭಾರತ ಸೋಲುವುದಕ್ಕೆ ಗಂಭೀರ್-ಅಗರ್ಕರ್ ಪ್ರತಿಷ್ಠೆಯೇ ಕಾರಣ ಎಂದು ಫ್ಯಾನ್ಸ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.