ರಾಂಚಿ: ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಮೊದಲ ಏಕದಿನ ಪಂದ್ಯದಲ್ಲಿ ಕರ್ನಾಟಕ ಮೂಲದ ಆಟಗಾರರಾದ ಕೆಎಲ್ ರಾಹುಲ್ ಮತ್ತು ಪ್ರಸಿದ್ಧ ಕೃಷ್ಣ ಕನ್ನಡದಲ್ಲೇ ಮಾತನಾಡುತ್ತಿರುವ ವಿಡಿಯೋ ವೈರಲ್ ಆಗಿದೆ.
ಇಬ್ಬರೂ ಆಟಗಾರರು ಮೈದಾನದಲ್ಲಿ ಕನ್ನಡದಲ್ಲೇ ಮಾತನಾಡಿಕೊಳ್ಳುವ ವಿಡಿಯೋ ಹಿಂದೆಯೂ ಸಾಕಷ್ಟು ಬಾರಿ ವೈರಲ್ ಆಗಿತ್ತು. ಈ ಸರಣಿಯಲ್ಲಿ ಕೆಎಲ್ ರಾಹುಲ್ ನಾಯಕರಾಗಿ ತಂಡವನ್ನು ಮುನ್ನಡೆಸುತ್ತಿದ್ದಾರೆ. ನಿನ್ನೆಯ ಪಂದ್ಯದಲ್ಲಿ ಪ್ರಸಿದ್ಧ ತಂಡದಲ್ಲಿ ಸ್ಥಾನ ಪಡೆದಿದ್ದರು.
ದಕ್ಷಿಣ ಆಫ್ರಿಕಾ ಬ್ಯಾಟಿಂಗ್ ವೇಳೆ ಭಾರತ ನಿಧಾನಗತಿಯ ಓವರ್ ಭೀತಿಯಲ್ಲಿತ್ತು. ಇದರಿಂದ ದಂಡ ವಿಧಿಸಿಕೊಳ್ಳುವ ಅಪಾಯವಿತ್ತು. ಹೀಗಾಗಿ ರಾಹುಲ್ ಬೌಲರ್ ಗಳಲ್ಲಿ ಬೇಗ ಓವರ್ ಮುಗಿಸುವಂತೆ ಸೂಚನೆ ಕೊಡುತ್ತಿದ್ದರು.
ಅದೇ ರೀತಿ ಪ್ರಸಿದ್ಧಗೂ ಸೂಚನೆ ಕೊಟ್ಟಿದ್ದಾರೆ. ಕನ್ನಡದಲ್ಲೇ ಪ್ರಸಿದ್ಧ್.. ಮಗಾ ಜೋರಾಗಿ ಓಡ್ ಬಾ.. ಜೋರಾಗಿ ಓಡ್ ಮಗಾ ಎಂದು ಹೇಳಿದ್ದು ಸ್ಟಂಪ್ ಮೈಕ್ ನಲ್ಲಿ ಸೆರೆಯಾಗಿದೆ. ಈ ವಿಡಿಯೋ ಇಲ್ಲಿದೆ ನೋಡಿ.