ರಾಂಚಿ: ದಕ್ಷಿಣ ಆಫ್ರಿಕಾ ವಿರುದ್ಧ ಮೊದಲ ಏಕದಿನ ಪಂದ್ಯ ಗೆದ್ದ ಬಳಿಕ ಡ್ರೆಸ್ಸಿಂಗ್ ರೂಂನಲ್ಲಿ ಗೌತಮ್ ಗಂಭೀರ್ ಎದುರಾದಾಗ ವಿರಾಟ್ ಕೊಹ್ಲಿ ನಡೆದುಕೊಂಡ ರೀತಿ ಶಾಕಿಂಗ್ ಆಗಿದೆ. ಈ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ನಿನ್ನೆಯ ಪಂದ್ಯವನ್ನು ಭಾರತ 17 ರನ್ ಗಳಿಂದ ರೋಚಕವಾಗಿ ಗೆದ್ದುಕೊಂಡಿತ್ತು. ಈ ಪಂದ್ಯದಲ್ಲಿ 135 ರನ್ ಸಿಡಿಸಿದ ವಿರಾಟ್ ಕೊಹ್ಲಿ ಪಂದ್ಯ ಶ್ರೇಷ್ಠರಾಗಿದ್ದರು. ಪಂದ್ಯ ಮುಗಿದ ಬಳಿಕ ಎಲ್ಲರೂ ಡ್ರೆಸ್ಸಿಂಗ್ ರೂಂ ಒಳಗೆ ಬರುತ್ತಿದ್ದರು.
ಆಗ ಗೌತಮ್ ಗಂಭೀರ್ ಒಳಗೆ ನಿಂತಿದ್ದರು. ವಿರಾಟ್ ಕೊಹ್ಲಿ ಡ್ರೆಸ್ಸಿಂಗ್ ರೂಂನೊಳಗೆ ಹೋಗುವಾಗ ಎದುರು ಗಂಭೀರ್ ಪಕ್ಕದಲ್ಲೇ ಹಾದು ಹೋಗಿದ್ದಾರೆ. ಆ ಗಂಭೀರ್ ಹತ್ತಿರ ಬರುತ್ತಿದ್ದಂತೇ ಕೊಹ್ಲಿ ತಮ್ಮ ಫೋನ್ ತೆಗೆದು ನೋಡುತ್ತಾ ಗಂಭೀರ್ ಕಡೆ ಕಣ್ಣೆತ್ತಿಯೂ ನೋಡದೇ ಹೋಗಿದ್ದಾರೆ.
ಇತ್ತ ಗೌತಮ್ ಗಂಭೀರ್ ತಮ್ಮತ್ತ ನೋಡದ ಕೊಹ್ಲಿ ಕಡೆಗೆ ದಿಟ್ಟಿಸಿ ನೋಡುತ್ತಲೇ ಇದ್ದರು. ಆದರೆ ಕೊಹ್ಲಿ ಮಾತ್ರ ಕ್ಯಾರೇ ಎನ್ನದೇ ಒಳಗೆ ಹೋಗಿದ್ದಾರೆ. ಈ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.