Select Your Language

Notifications

webdunia
webdunia
webdunia
webdunia

ವಿರಾಟ್ ಕೊಹ್ಲಿ ಪಾಲಿಗೆ ಕೆಎಲ್ ರಾಹುಲ್ ಲಕ್ಕಿ ಚಾರ್ಮ್: ಯಾಕೆ ಇಲ್ಲಿದೆ ನೋಡಿ ವಿವರ

KL Rahul-Virat Kohli
Photo Credit: X
ರಾಂಚಿ: ಟೀಂ ಇಂಡಿಯಾ ಸ್ಟಾರ್ ಕ್ರಿಕೆಟಿಗ ವಿರಾಟ್ ಕೊಹ್ಲಿ ಪಾಲಿಗೆ ಕೆಎಲ್ ರಾಹುಲ್ ಲಕ್ಕಿ ಚಾರ್ಮ್ ಅಂತೆ. ಅದಕ್ಕೆ ಕಾರಣ ಇಲ್ಲಿದೆ ನೋಡಿ.

ದಕ್ಷಿಣ ಆಫ್ರಿಕಾ ವಿರುದ್ಧ ಏಕದಿನ ಸರಣಿಯಲ್ಲಿ ಟೀಂ ಇಂಡಿಯಾವನ್ನು ಕೆಎಲ್ ರಾಹುಲ್ ಮುನ್ನಡೆಸುತ್ತಿದ್ದಾರೆ. ಮೊದಲ ಪಂದ್ಯದಲ್ಲಿ ವಿರಾಟ್ ಕೊಹ್ಲಿ 135 ರನ್ ಗಳ ಶತಕದ ಇನಿಂಗ್ಸ್ ಆಡಿದ್ದಾರೆ. ಈ ಪಂದ್ಯದ ಮೂಲಕ ಅವರು ಹಲವು ದಿನಗಳ ಶತಕದ ಬರ ನೀಗಿಸಿಕೊಂಡರು.

ಇದರ ಬೆನ್ನಲ್ಲೇ ಆಸಕ್ತಿದಾಯಕ ಅಂಕಿ ಅಂಶವೊಂದು ಹೊರಬಿದ್ದಿದೆ. ಕೆಎಲ್ ರಾಹುಲ್ ನಾಯಕರಾಗಿದ್ದಾಗಲೆಲ್ಲಾ ಕೊಹ್ಲಿ ಚೆನ್ನಾಗಿ ಆಡಿದ್ದಾರೆ. ತಮ್ಮ ನಾಯಕತ್ವದಲ್ಲಿ ಆಡಿದ್ದಕ್ಕಿಂತಲೂ ಕೆಎಲ್ ರಾಹುಲ್ ನಾಯಕತ್ವದಲ್ಲಿ ಕೊಹ್ಲಿ ಸರಾಸರಿ ಅತ್ಯುತ್ತಮವಾಗಿದೆ.

ಕೆಎಲ್ ರಾಹುಲ್ ನಾಯಕತ್ವದಲ್ಲಿ ಕೊಹ್ಲಿ ಒಟ್ಟು 5 ಪಂದ್ಯಗಳನ್ನು ಆಡಿದ್ದಾರೆ. ಈ ಐದು ಪಂದ್ಯಗಳ ಪೈಕಿ ಎರಡು ಶತಕ, ಎರಡು ಅರ್ಧಶತಕ ಸಿಡಿಸಿದ್ದಾರೆ. ಅವರ ಸರಾಸರಿ 72.80% ದಷ್ಟಿದೆ. ಒಟ್ಟು 364 ರನ್ ಕಲೆ ಹಾಕಿದ್ದಾರೆ. ಹೀಗಾಗಿ ಕೆಎಲ್ ರಾಹುಲ್ ನಾಯಕತ್ವ ಕೊಹ್ಲಿ ಪಾಲಿಗೆ ಲಕ್ಕಿ ಚಾರ್ಮ್ ಎಂದು ಅಭಿಮಾನಿಗಳು ಹೇಳುತ್ತಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

Video: ಜೋರಾಗ್ ಓಡ್ ಮಗಾ...ಮೈದಾನದಲ್ಲಿ ಪ್ರಸಿದ್ಧಗೆ ಕನ್ನಡದಲ್ಲೇ ಆರ್ಡರ್ ಮಾಡಿದ ಕೆಎಲ್ ರಾಹುಲ್