Select Your Language

Notifications

webdunia
webdunia
webdunia
webdunia

ಶತಕದ ಬೆನ್ನಲ್ಲೇ ಐಸಿಸಿ ಏಕದಿನ ಶ್ರೇಯಾಂಕದಲ್ಲಿ ಕೊಹ್ಲಿಗೆ ಬಡ್ತಿ: ಅಗ್ರಸ್ಥಾನದಲ್ಲಿ ರೋಹಿತ್‌ ಶರ್ಮಾ

Star Batter Virat Kohli, International Cricket Council, Rohit Sharma

Sampriya

ದುಬೈ , ಬುಧವಾರ, 3 ಡಿಸೆಂಬರ್ 2025 (16:31 IST)
ದುಬೈ: ಭಾರತದ ಅನುಭವಿ ಬ್ಯಾಟರ್‌ಗಳಾದ ರೋಹಿತ್‌ ಶರ್ಮಾ ಮತ್ತು ವಿರಾಟ್‌ ಕೊಹ್ಲಿ ಅವರು ಐಸಿಸಿ ಏಕದಿನ ರ‍್ಯಾಂಕಿಂಗ್‌ ಬ್ಯಾಟರ್‌ಗಳ ಪಟ್ಟಿಯಲ್ಲಿ ಕ್ರಮವಾಗಿ ಅಗ್ರಸ್ಥಾನ ಮತ್ತು ಐದನೇ ಸ್ಥಾನದಲ್ಲಿದ್ದಾರೆ. 

ಐಸಿಸಿ ಬುಧವಾರ ಬಿಡುಗಡೆ ಮಾಡಿದ ರ‍್ಯಾಂಕಿಂಗ್‌ ಪಟ್ಟಿ ಈ ಬದಲಾವಣೆಯಾಗಿದೆ. ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ ಪ್ರಕಟಿಸಿದ ಪುರುಷರ ಆಟಗಾರರ ಏಕದಿನ ಪಟ್ಟಿಯಲ್ಲಿ ಭಾರತದ ಸ್ಟಾರ್‌ ಬ್ಯಾಟರ್‌ ವಿರಾಟ್ ಕೊಹ್ಲಿ ಒಂದು ಸ್ಥಾನ ಮೇಲೇರಿದ್ದಾರೆ. ಆರನೇ ಸ್ಥಾನದಿಂದ ಐದನೇ ಸ್ಥಾನಕ್ಕೇರಿದ್ಧಾರೆ. 

ಗಾಯದ ಕಾರಣದಿಂದ ಹೊರಗುಳಿದಿರುವ ನಾಯಕ ಶುಭಮನ್ ಗಿಲ್ ಅವರನ್ನು ಹಿಂದಿಕ್ಕಿದ ಕೊಹ್ಲಿ ಐದನೇ ಸ್ಥಾನಕ್ಕೆ ಏರಿದ್ದಾರೆ. 751 ರೇಟಿಂಗ್ ಅಂಕಗಳನ್ನು ಹೊಂದಿರುವ ಕೊಹ್ಲಿ ಅಗ್ರಸ್ಥಾನಕ್ಕೇರುವತ್ತ ವೇಗವಾಗಿ ಸಾಗುತ್ತಿದ್ದಾರೆ. ರಾಂಚಿಯಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಆಡಿದ ಮೊದಲ ಏಕದಿನ ಪಂದ್ಯದಲ್ಲಿ ಅವರು 120 ಎಸೆತಗಳಲ್ಲಿ 135 ರನ್‌ಗಳ ಸ್ಫೋಟಕ ಶತಕ ಬಾರಿಸಿದ್ದರು. 

ಪಟ್ಟಿಯಲ್ಲಿ ರೋಹಿತ್ ಶರ್ಮಾ 783 ಅಂಕಗಳೊಂದಿಗೆ ನಂಬರ್ ಒನ್ ಸ್ಥಾನವನ್ನು ಕಾಯ್ದುಕೊಂಡಿದ್ದಾರೆ. ಎರಡನೇ ಸ್ಥಾನಕ್ಕೆ ಡೇರಿಲ್ ಮಿಚೆಲ್, ಮೂರನೇ ಸ್ಥಾನಕ್ಕೆ ಇಬ್ರಾಹಿಂ ಜದ್ರಾನ್ ಏರಿದ್ದಾರೆ.

ಬೌಲಿಂಗ್ ವಿಭಾಗದಲ್ಲಿ ಕುಲದೀಪ್ ಯಾದವ್ ಒಂದು ಸ್ಥಾನ ಏರಿಕೆ ಕಂಡು ಆರನೇ ಸ್ಥಾನಕ್ಕೇರಿದ್ದಾರೆ. ಅಗ್ರ ಐದು ಸ್ಥಾನಗಳಲ್ಲಿ ರಶೀದ್ ಖಾನ್, ಜೋಫ್ರಾ ಆರ್ಚರ್, ಕೇಶವ್ ಮಹಾರಾಜ್ ಹಾಗೂ ಮತೀಶ್ ತೀಕ್ಷಣ ಇದ್ದಾರೆ. ಟೆಸ್ಟ್ ಬೌಲರ್‌ಗಳಲ್ಲಿ ಭಾರತದ ಜಸ್ಪ್ರೀತ್ ಬುಮ್ರಾ ಅಗ್ರಸ್ಥಾನ ಭದ್ರಪಡಿಸಿಕೊಂಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ವಿರಾಟ್‌ ಕೊಹ್ಲಿ ದಾಖಲೆಯ 53ನೇ ಏಕದಿನ ಶತಕ: ಟೀಕಾಕಾರರಿಗೆ ಬ್ಯಾಟ್‌ ಮೂಲಕವೇ ಉತ್ತರ