Select Your Language

Notifications

webdunia
webdunia
webdunia
webdunia

ವಿರಾಟ್‌ ಕೊಹ್ಲಿ ದಾಖಲೆಯ 53ನೇ ಏಕದಿನ ಶತಕ: ಟೀಕಾಕಾರರಿಗೆ ಬ್ಯಾಟ್‌ ಮೂಲಕವೇ ಉತ್ತರ

Virat Kohli

Sampriya

ರಾಯ್‌ಪುರ , ಬುಧವಾರ, 3 ಡಿಸೆಂಬರ್ 2025 (16:19 IST)
Photo Credit X
ರಾಯ್‌ಪುರ: ಭಾರತದ ಸ್ಟಾರ್ ಬ್ಯಾಟರ್ ವಿರಾಟ್‌ ಕೊಹ್ಲಿ ಅವರು ಏಕದಿನ ಕ್ರಿಕೆಟ್‌ನಲ್ಲಿ ದಾಖಲೆಯ 53ನೇ ಶತಕ ದಾಖಲಿಸಿದ್ದಾರೆ. ಈ ಮೂಲಕ ಟೀಕಾಕಾರರಿಗೆ ಬ್ಯಾಟ್‌ ಮೂಲಕ ಉತ್ತರ ನೀಡಿದ್ದಾರೆ.

ದಕ್ಷಿಣ ಆಫ್ರಿಕಾ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ಈ ಸಾಧನೆ ಮಾಡಿದ್ಧಾರೆ. ವಿರಾಟ್‌ ಕೊಹ್ಲಿ ಮತ್ತು ಋತುರಾಜ್ ಗಾಯಕವಾಡ್ (105) ಅವರ ಶತಕಗಳ ಬಲದಿಂದ ಭಾರತ ತಂಡವು ಬೃಹತ್‌ ಮೊತ್ತ ಕಲೆಹಾಕಿದೆ.

37 ವರ್ಷದ ವಿರಾಟ್‌ ಕೊಹ್ಲಿ ಅವರು ಈಗಾಗಲೇ ಟೆಸ್ಟ್‌ ಮತ್ತು ಟಿ20 ಕ್ರಿಕೆಟ್‌ ಮಾದರಿಗೆ ನಿವೃತ್ತಿ ಘೋಷಣೆ ಮಾಡಿದ್ದಾರೆ. ಏಕದಿನ ಮಾದರಿಯಲ್ಲಿ ಮಾತ್ರ ಭಾರತ ತಂಡವನ್ನು ಪ್ರತಿನಿಧಿಸುತ್ತಿರುವ ವಿರಾಟ್‌ ಸತತ ಎರಡನೇ ಶತಕ ದಾಖಲಿಸಿದ್ದಾರೆ. 90 ಎಸೆತಗಳಲ್ಲಿ ನೂರು ರನ್‌ ಗಡಿ ದಾಟಿದರು.

ಈ ಪಂದ್ಯದಲ್ಲೂ ಭಾರತ ಸತತ 20 ಬಾರಿ ಟಾಸ್‌ ಸೋತಿತು. ಭಾರತ ತಂಡವು ಬ್ಯಾಟಿಂಗ್‌ಗೆ ಇಳಿಯಿತು. ಯಶಸ್ವಿ ಜೈಸ್ವಾಲ್‌ (22) ಮತ್ತು ರೋಹಿತ್‌ ಶರ್ಮಾ (14) ಬೇಗನೆ ಪೆವಿಲಿಯನ್‌ ಸೇರಿಕೊಂಡರು. ಆದರೆ,  ವಿರಾಟ್‌ ಕೊಹ್ಲಿ ಮತ್ತು ಋತುರಾಜ್‌ ಮೂರನೇ ವಿಕೆಟ್‌ ಜೊತೆಯಾಟದಲ್ಲಿ 195 ರನ್‌ ಸೇರಿಸಿದರು. 

ಭಾರತ ತಂಡವು 38 ಓವರ್‌ಗಳಲ್ಲಿ 275 ರನ್‌ ಗಳಿಸಿ ಬೃಹತ್ ಮೊತ್ತದತ್ತ ದಾಪುಗಾಲು ಹಾಕಿದೆ. ವಿರಾಟ್‌ ಮತ್ತು ನಾಯಕ ರಾಹುಲ್‌ ಕ್ರೀಸ್‌ನಲ್ಲಿದ್ದಾರೆ. ಮೊದಲ ಪಂದ್ಯವನ್ನು ಗೆದ್ದಿರುv ಭಾರತ ತಂಡವು ಎರಡನೇ ಪಂದ್ಯವನ್ನು ಗೆದ್ದು, ಸರಣಿ ವಶಮಾಡಿಕೊಳ್ಳುವ ಛಲದಲ್ಲಿದೆ. 

Share this Story:

Follow Webdunia kannada

ಮುಂದಿನ ಸುದ್ದಿ

ಐಸಿಸಿ ನೀತಿ ಸಂಹಿತೆ ಉಲ್ಲಂಘನೆಗಾಗಿ ವಾಗ್ದಂಡನೆಗೆ ಗುರಿಯಾದ ಗಂಭೀರ್‌ ಮಾನಸಪುತ್ರ ಹರ್ಷಿತ್ ರಾಣಾ