ರಾಂಚಿ: ದಕ್ಷಿಣ ಆಫ್ರಿಕಾ ವಿರುದ್ಧ ಮೊದಲ ಏಕದಿನ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಶತಕ ಸಿಡಿಸಿದಾಗ ಪೆವಿಲಿಯನ್ ನಲ್ಲಿ ಸಂಭ್ರಮಿಸಿದ ರೋಹಿತ್ ಶರ್ಮಾ ಏನೋ ಹೇಳಿದ್ದು ವೈರಲ್ ಆಗಿತ್ತು. ಅವರು ಏನು ಹೇಳಿದ್ದರು ಎನ್ನುವುದು ಈಗ ರಿವೀಲ್ ಆಗಿದೆ.
ಮೊದಲ ಏಕದಿನ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ನ 83 ನೇ ಶತಕ ಸಿಡಿಸಿದ್ದರು. ಅವರು ಶತಕ ಸಿಡಿಸಿದಾಗ ರೋಹಿತ್ ಶರ್ಮಾ ಎದ್ದು ನಿಂತು ಚಪ್ಪಾಳೆ ತಟ್ಟುವ ಮೂಲಕ ಎಲ್ಲರಿಗಿಂತ ಹೆಚ್ಚು ಸಂಭ್ರಮಪಟ್ಟಿದ್ದರು.
ಚಪ್ಪಾಳೆ ತಟ್ಟುವುದರ ನಡುವೆ ರೋಹಿತ್ ಅಗ್ರೆಸಿವ್ ಆಗಿ ಏನೋ ಹೇಳಿದ್ದರು. ಸಾಮಾನ್ಯವಾಗಿ ರೋಹಿತ್ ಆ ರೀತಿ ಹೇಳುವುದಿಲ್ಲ. ಆದರೆ ಮೊನ್ನೆ ಏನು ಹೇಳಿರಬಹುದು ಎಂಬ ಕುತೂಹಲ ಎಲ್ಲರಲ್ಲಿದೆ. ಇದಕ್ಕೆ ಪಕ್ಕದಲ್ಲೇ ಇದ್ದ ವೇಗಿ ಅರ್ಷ್ ದೀಪ್ ಸಿಂಗ್ ಬ್ರೇಕ್ ಹಾಕಿದ್ದಾರೆ.
ರೋಹಿತ್ ಏನು ಹೇಳಿದ್ದರು ಎಂಬುದನ್ನು ಅರ್ಷ್ ದೀಪ್ ಸಿಂಗ್ ರಿವೀಲ್ ಮಾಡಿದ್ದಾರೆ. ರೋಹಿತ್ ಆ ಸಂದರ್ಭದಲ್ಲಿ ಏನು ಹೇಳಿದ್ದರು ಎಂದು ನನಗೆ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಪ್ರಶ್ನೆಗಳು ಬಂದಿತ್ತು. ಅದಕ್ಕಾಗಿ ಇಲ್ಲಿ ಹೇಳುತ್ತಿದ್ದೇನೆ. ಆಗ ರೋಹಿತ್ ಭಾಯಿ ನೀಲ್ ಪರೀ, ಲಾಲ್ ಪರೀ ಕಮರೇ ಮೇ ಬಂದ್, ಮುಝೇ ನಾದಿಯಾ ಪಸಂದ್ ಎನ್ನುವ ಹಿಂದಿ ಒಡಪು ಹೇಳಿದ್ದರು ಎಂದು ಅರ್ಷ್ ದೀಪ್ ಸಿಂಗ್ ಹೇಳಿದ್ದಾರೆ.