ರಾಯ್ಪುರ: ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ದ್ವಿತೀಯ ಏಕದಿನ ಪಂದ್ಯದಲ್ಲಿ ಬೌಲಿಂಗ್ ಮಾಡುತ್ತಿದ್ದ ಪ್ರಸಿದ್ಧ ಕೃಷ್ಣಗೆ ಕೆಎಲ್ ರಾಹುಲ್ ಕನ್ನಡದಲ್ಲೇ ಹೇಳಿದ್ದು ಹಾಕು ಎಂದು ಬೈದ ವಿಡಿಯೋ ಈಗ ವೈರಲ್ ಆಗಿದೆ.
ನಿನ್ನೆಯ ಪಂದ್ಯವನ್ನು 358 ರನ್ ಗಳಿಸಿಯೂ ಟೀಂ ಇಂಡಿಯಾ ಕಳಪೆ ಬೌಲಿಂಗ್ ಮತ್ತು ಫೀಲ್ಡಿಂಗ್ ನಿಂದಾಗಿ ಸೋತಿದೆ. ಅದರಲ್ಲೂ ಕನ್ನಡಿಗ ಬೌಲರ್ ಪ್ರಸಿದ್ಧ ಕೃಷ್ಣ ಬಲು ದುಬಾರಿಯಾದರು. ಒಟ್ಟು 8.2 ಓವರ್ ಗಳಲ್ಲಿ ಅವರು 85 ರನ್ ನೀಡಿದ್ದರು.
ಇನ್ನು ಪಂದ್ಯದ ನಡುವೆ ಕನ್ನಡಿಗರಾದ ಕೆಎಲ್ ರಾಹುಲ್ ಮತ್ತು ಪ್ರಸಿದ್ಧ ಕೃಷ್ಣ ನಡುವೆ ಮಾತಿನ ವಿಡಿಯೋವೊಂದು ಈಗ ವೈರಲ್ ಆಗಿದೆ. ಅದರಲ್ಲೂ ವಿಪರೀತ ರನ್ ನೀಡುತ್ತಿದ್ದ ಪ್ರಸಿದ್ಧ ಕೃಷ್ಣ ಮೇಲೆ ರಾಹುಲ್ ಸಿಟ್ಟಿಗೆದ್ದ ಘಟನೆ ನಡೆದಿದೆ.
ಪ್ರಸಿದ್ಧ ನಿನ್ ತಲೆ ಓಡಿಸ್ಬೇಡ. ಹೇಳಿದ್ದು ಹಾಕು. ಹೇಳಿದ್ದೀನಿ ಏನು ಹಾಕಬೇಕು ಅಂತ ಎಂದು ರಾಹುಲ್ ಹೇಳುತ್ತಾರೆ. ಅದಕ್ಕೆ ಪ್ರಸಿದ್ಧ್ ತಲೆಗೆ ಹಾಕಲಾ? ಎಂದು ಕೇಳುತ್ತಾರೆ. ಆಗ ರಾಹುಲ್ ಸಿಟ್ಟಾಗಿ ತಲೆಗೆಲ್ಲಾ ಬೇಡ ಈಗ ಎನ್ನುತ್ತಾರೆ. ರಾಹುಲ್ ಹೇಳಿದ ಮೇಲೂ ಪ್ರಸಿದ್ಧ್ ಅದೇ ರೀತಿ ಬೌಲಿಂಗ್ ಮಾಡಿದಾಗ ಸಿಟ್ಟಾಗುವ ರಾಹುಲ್ ಪ್ರಸಿದ್ಧ ಹೇಳಿದ್ದೀನಿ ತಲೆಗೆಲ್ಲಾ ಹಾಕಬೇಡ ಅಂತ. ಆದ್ರೂ ಹಾಕ್ತೀಯಲ್ಲಾ ಮಗಾ ಎಂದು ಆಕ್ರೋಶ ಹೊರಹಾಕುತ್ತಾರೆ. ಈ ವಿಡಿಯೋ ಈಗ ವೈರಲ್ ಆಗಿದೆ.