ವಿಶಾಖಪಟ್ಟಣಂ: ಬರೋಬ್ಬರಿ ಎರಡು ವರ್ಷಗಳ ಬಳಿಕ ಟೀಂ ಇಂಡಿಯಾ ಇಂದು ಏಕದಿನ ಪಂದ್ಯಗಳಲ್ಲಿ ಮೊದಲ ಬಾರಿಗೆ ಟಾಸ್ ಗೆದ್ದಿದೆ. ಇಂದು ಕೆಎಲ್ ರಾಹುಲ್ ಟಾಸ್ ಗೆದ್ದಿರುವುದರ ಹಿಂದಿದೆ ರೋಚಕ ಕಹಾನಿ.
2023 ರ ಏಕದಿನ ವಿಶ್ವಕಪ್ ಸೆಮಿಫೈನಲ್ ನಲ್ಲಿ ಟಾಸ್ ಗೆದ್ದಿದ್ದೇ ಕೊನೆ. ಅದಾದ ಬಳಿಕ ಇದುವರೆಗೆ ಏಕದಿನ ಪಂದ್ಯಗಳಲ್ಲಿ ಟೀಂ ಇಂಡಿಯಾ ಯಾರೇ ನಾಯಕರಾಗಿದ್ದರೂ ಒಮ್ಮೆಯೂ ಟಾಸ್ ಗೆದ್ದಿಲ್ಲ. ಪ್ರತೀ ಬಾರಿಯೂ ಟಾಸ್ ಸೋಲುವುದರಿಂದ ಭಾರತೀಯ ಅಭಿಮಾನಿಗಳಿಗೂ ನಿರಾಸೆಯಾಗುತ್ತಿತ್ತು.
ಆದರೆ ಇಂದು ರಾಹುಲ್ ಅದೇನು ಅದೃಷ್ಟ ಮಾಡಿದ್ದರೋ ಕೊನೆಗೂ ಟಾಸ್ ಗೆದ್ದಿದೆ. ಹೀಗಾಗಿ ಸಹಜವಾಗಿ ರಾಹುಲ್ ಮುಖದಲ್ಲಿ ನಗು, ಉಳಿದ ಆಟಗಾರರಲ್ಲೂ ಸಂಭ್ರಮ. ಈ ಟಾಸ್ ಗೆಲ್ಲಲು ರಾಹುಲ್ ಗೆ ವಿರಾಟ್ ಕೊಹ್ಲಿ ಸೇರಿದಂತೆ ತಂಡದ ಕೆಲವು ಆಟಗಾರರು ಕೆಲವು ಸಲಹೆ ನೀಡಿದ್ದಾರಂತೆ.
ವಿಶೇಷವೆಂದರೆ ಇಂದು ರಾಹುಲ್ ಎಡಗೈಯಲ್ಲಿ ಕಾಯಿನ್ ಎಸೆದರು. ಆ ಮೂಲಕ ಅವರಿಗೆ ಎಡಗೈ ಅದೃಷ್ಟ ತಂದುಕೊಟ್ಟಿದೆ. ಟಾಸ್ ಗೆಲ್ಲಲು ಏನೆಲ್ಲಾ ಕಸರತ್ತು ಮಾಡಿದ್ದೇವೆಂದು ಬಿಸಿಸಿಐ ವಿಡಿಯೋವೊಂದನ್ನು ಹಂಚಿಕೊಂಡಿದೆ. ಅದು ಇಲ್ಲಿದೆ ನೋಡಿ.