ಬೆಂಗಳೂರು: ಸಿಎಂ ಸಿದ್ದರಾಮಯ್ಯನವರನ್ನು ಇಂದು ಬ್ರೇಕ್ ಫಾಸ್ಟ್ ಮೀಟಿಂಗ್ ಕರೆದಿರುವ ಡಿಸಿಎಂ ಡಿಕೆ ಶಿವಕುಮಾರ್ ಇದಕ್ಕಾಗಿ ಭರ್ಜರಿ ಪ್ಲ್ಯಾನ್ ಮಾಡಿಕೊಂಡಿದ್ದಾರೆ.
ರಾಜ್ಯದಲ್ಲಿ ಅಧಿಕಾರ ಹಂಚಿಕೆ ಕುಸ್ತಿ ನಡೆಯುತ್ತಿರುವ ಬೆನ್ನಲ್ಲೇ ವಿರೋಧ ಪಕ್ಷದವರಿಗೆ ನಮ್ಮಲ್ಲಿ ಏನೂ ಭಿನ್ನಾಭಿಪ್ರಾಯಗಳಿಲ್ಲ ಎಂದು ಸಾರಲು ಸಿಎಂ-ಡಿಸಿಎಂ ಪರಸ್ಪರ ಬ್ರೇಕ್ ಫಾಸ್ಟ್ ಮೀಟಿಂಗ್ ಮಾಡುತ್ತಿದ್ದಾರೆ. ಮೊನ್ನೆ ಸಿದ್ದರಾಮಯ್ಯ ನಿವಾಸದಲ್ಲಿ ಮೀಟಿಂಗ್ ನಡೆದಿತ್ತು.
ಇದೀಗ ಡಿಕೆ ಶಿವಕುಮಾರ್ ತಮ್ಮ ಮನೆಗೆ ಬ್ರೇಕ್ ಫಾಸ್ಟ್ ಗೆ ಸಿಎಂ ಸಿದ್ದರಾಮಯ್ಯರನ್ನು ಆಹ್ವಾನಿಸಿದ್ದಾರೆ. ಇಂದು ಸಿಎಂ ಭೇಟಿ ನೀಡುತ್ತಿದ್ದಾರೆ. ಇದಕ್ಕಾಗಿ ಡಿಕೆ ಶಿವಕುಮಾರ್ ಭರ್ಜರಿ ಸಿದ್ಧತೆಯನ್ನೇ ಮಾಡಿದ್ದಾರೆ. ಸಿಎಂ ಇಷ್ಟದ ಮೆನುವನ್ನೇ ಮಾಡಿಸುತ್ತಿದ್ದಾರೆ.
ಸಿದ್ದರಾಮಯ್ಯ ಇಷ್ಟಪಡುವ ನಾಟಿ ಕೋಳಿ ಸಾರು, ಇಡ್ಲಿ, ನಾಟಿ ಕೋಳಿ ಫ್ರೈ ಮೆನು ಸಿದ್ಧಪಡಿಸಿದ್ದಾರೆ. ಹೊಟ್ಟೆ ತಂಪು ಮಾಡಿದರೆ ಮನುಷ್ಯನೂ ತೃಪ್ತಿಯಾಗುತ್ತಾನಂತೆ. ಅದೇ ರೀತಿ ಡಿಕೆಶಿಯೂ ಸಿದ್ದುಗೆ ಇಷ್ಟದ ಮೆನು ಸಿದ್ಧಪಡಿಸಿ ತಮ್ಮ ಸ್ಥಾನ ಭದ್ರಪಡಿಸಿಕೊಳ್ಳುತ್ತಿದ್ದಾರಾ ಎಂದು ಜನ ಕಾಲೆಳೆದಿದ್ದಾರೆ.