ಬೆಂಗಳೂರು: ಚಿಕ್ಕಪೇಟೆ ಮಾಜಿ ಶಾಸಕ, ಕಾಂಗ್ರೆಸ್ ನಾಯಕ ಆರ್ ವಿ ದೇಶರಾಜ್ ಹೃದಯಸ್ತಂಬನದಿಂದ ಸಾವನ್ನಪ್ಪಿದ್ದಾರೆ. ಹುಟ್ಟುಹಬ್ಬಕ್ಕೆ ಒಂದು ದಿನ ಮುಂಚೆ ಸಾವಾಗಿದೆ.
ನಾಳೆ ಆರ್ ವಿ ದೇವರಾಜ್ ಹುಟ್ಟುಹಬ್ಬವಿತ್ತು. ಈ ಕಾರಣಕ್ಕೆ ಅವರು ಮೈಸೂರಿಗೆ ಕಾರಿನಲ್ಲಿ ಪ್ರಯಾಣ ಮಾಡುತ್ತಿದ್ದರು. ಪ್ರಯಾಣದ ವೇಳೆಯೇ ಅವರಿಗೆ ಹೃದಯ ಸ್ತಂಬನವಾಗಿದೆ. ಚಾಮುಂಡಿ ತಾಯಿ ದರ್ಶನಕ್ಕೆ ತೆರಳುವಾಗಲೇ ಸಾವನ್ನಪ್ಪಿದ್ದಾರೆ.
ತಕ್ಷಣವೇ ಅವರನ್ನು ಜಯದೇವ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಪ್ರಾಣ ಉಳಿಸಲಾಗಿಲ್ಲ. ಅವರ ಅಂತ್ಯ ಸಂಸ್ಕಾರವನ್ನು ನಾಳೆ ಕನಕಪುರದ ಸೋಮನಹಳ್ಳಿಯ ತೋಟದ ಮನೆಯಲ್ಲಿ ನೆರವೇರಿಸಲು ಕುಟುಂಬಸ್ಥರು ತೀರ್ಮಾನಿಸಿದ್ದಾರೆ.
ಜಯದೇವ ಆಸ್ಪತ್ರೆಯಿಂದ ಕಲಾಸಿಪಾಳ್ಯದ ಮನೆಗೆ ಕರೆತರಲಾಯಿತು. ಸಾಕಷ್ಟು ಮಂದಿ ಅವರ ಅಂತಿಮ ದರ್ಶನ ಪಡೆಯುತ್ತಿದ್ದಾರೆ. ಅವರ ಅಗಲಿಕೆಗೆ ಡಿಸಿಎಂ ಡಿಕೆ ಶಿವಕುಮಾರ್ ಸೇರಿದಂತೆ ರಾಜಕೀಯ ಗಣ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ.