Select Your Language

Notifications

webdunia
webdunia
webdunia
webdunia

ಸಿಎಂ ಕುರ್ಚಿ ಕಿತ್ತಾಟಕ್ಕೆ ಬ್ರೇಕ್ ಬೆನ್ನಲ್ಲೇ ಸಚಿವ ಮಹದೇವಪ್ಪ ಹೊಸ ಬಾಂಬ್

HC Mahadevappa

Sampriya

ದಾವಣಗೆರೆ , ಸೋಮವಾರ, 1 ಡಿಸೆಂಬರ್ 2025 (18:14 IST)
ದಾವಣಗೆರೆ: ಬ್ರೇಕ್‌ಫಾಸ್ಟ್‌ ಮೀಟಿಂಗ್ ಬಳಿಕ ಸಿಎಂ ಕುರ್ಚಿ ವಿಚಾರವಾಗಿ ಸೈಲೆಂಟ್ ಆಗಿರುವ ವಿಚಾರ ನಡುವೆ ಸಮಾಜ ಕಲ್ಯಾಣ ಸಚಿವ ಮಹದೇವಪ್ಪ ಅವರು ಸಿಎಂ ಸ್ಥಾನದಲ್ಲಿ ಸಿದ್ದರಾಮಯ್ಯನವರೇ ಗಟ್ಟಿಯಾಗಿದ್ದಾರೆ ಎಂದು ಹೇಳಿಕೆ ನೀಡಿದ್ದಾರೆ. 

ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ಕಾಂಗ್ರೆಸ್ ಪಕ್ಷದಲ್ಲಿ ಬದಲಾವಣೆ ವಿಷಯವೇ ಇಲ್ಲ. ಇದೀಗ ಊಹಾಪೋಹಗಳು ಬೇಕಾಗಿಲ್ಲ. ? ಯಾವುದೇ ಗೊಂದಲ ಇರಬಾರದು ಎಂದು ಸಿಎಂ ಡಿಸಿಎಂ ಬ್ರೇಕ್ ಫಾಸ್ಟ್ ಮೀಟಿಂಗ್ ಮಾಡಿದ್ದಾರೆ ಎಂದರು.

ಇನ್ನೂ ಹೈಕಮಾಂಡ್ ಸೂಚನೆಯಂತೆ ಮುಂದಿನ ಐದು ವರ್ಷ ಸರ್ಕಾರವನ್ನು ನಡೆಸುತ್ತೇವೆ. 2028ರಲ್ಲಿ ಮತ್ತೇ ಕಾಂಗ್ರೆಸ್‌ ಪಕ್ಷವೇ ಅಧಿಕಾರಕ್ಕೆ ಬರುತ್ತದೆ. ಕ್ರಿಕೆಟ್ ಆಡುವ 11 ಮಾತ್ರ ಬ್ಯಾಟ್‌ ಬೀಸಬೇಕು. ಉಳಿದವರು ಬ್ಯಾಟ್‌ ಬೀಸಿದರೆ ಏನು ಪ್ರಯೋಜನವಿಲ್ಲ. ಇನ್ನೂ ಯಾವ ಸ್ವಾಮೀಜಿಗಳು ತಮ್ಮ ಧ್ವನಿ ಎತ್ತಿದರೂ ಹೈಕಮಾಂಡ್ ನಿರ್ಧಾರವೇ ಅಂತಿಮವಾಗಿರುತ್ತದೆ ಎಂದರು. 

ಇನ್ನೂ ಸರ್ಕಾರ ಸ್ಥಿರವಾಗಿದ್ದು, ಸಿದ್ದರಾಮಯ್ಯನವರೇ ಸಿಎಂ ಆಗಿ ಮುಂದುವರೆಯುತ್ತಾರೆ. 

ಇನ್ನೂ ಬಿಜೆಪಿಯ ಕಾಂಗ್ರೆಸ್‌ ಶಾಸಕರ ಖರೀದಿ ಆರೋ‍‍ಪ ಸಂಬಂಧ ಪ್ರತಿಕ್ರಿಯಿಸಿದ ಅವರು, ಮೊದಲು ಅವರು ಯಾವಾ ರೀತಿ ಅಧಿಕಾರಕ್ಕೆ ಬಂದರು ಎಂಬುದನ್ನು ಹೇಳಲಿ. ಅವರೇನು ಸ್ವಂತ ಬಲದಿಂದ ಅಧಿಕಾರಕ್ಕೆ ಬಂದಿದ್ದಾರಾ? ಕನ್ನೇರಿ ಶ್ರೀಗಳು ಏನ್ ಹೇಳಿಕೆ ನೀಡುತ್ತಾರೆ ಎನ್ನುವುದು ಗೊತ್ತಿಲ್ಲ. ನನಗೆ ಬಾಬಾ ಸಾಹೇಬರ ಸಂವಿಧಾನದ ಬಗ್ಗೆ ಮಾತ್ರ ತಿಳಿದಿದೆ ಎಂದರು.

Share this Story:

Follow Webdunia kannada

ಮುಂದಿನ ಸುದ್ದಿ

ರಾಹುಲ್ ಗಾಂಧಿಗೆ ಚಿತ್ರಹಿಂಸೆ ನೀಡಲು ಬಿಜೆಪಿಯಿಂದ ತನಿಖಾ ಸಂಸ್ಥೆ ದುರ್ಬಳಕೆ: ಶಿವಕುಮಾರ್