ಬೆಂಗಳೂರು: ರಾಜ್ಯದಲ್ಲಿ ನಡೆಯುತ್ತಿರುವ ಕುರ್ಚಿ ಕದನದ ಬಗ್ಗೆ ಜೆಡಿಎಸ್ ವ್ಯಂಗ್ಯ ಮಾಡಿದ್ದು ಡಿಸಿಎಂ ಡಿಕೆ ಶಿವಕುಮಾರ್ ವಿರುದ್ಧ ಗಂಭೀರ ಆರೋಪ ಮಾಡಿದೆ.
ರಾಜ್ಯದಲ್ಲಿ ಈಗ ಬ್ರೇಕ್ ಫಾಸ್ಟ್ ಮೀಟಿಂಗ್ ಗಳ ಸರಮಾಲೆ ನಡೆಯುತ್ತಿದೆ. ಕುರ್ಚಿ ಕದನ ಇಲ್ಲ ಎನ್ನುತ್ತಲೇ ಸಿದ್ದರಾಮಯ್ಯ-ಡಿಕೆ ಶಿವಕುಮಾರ್ ಒಳಗೊಳಗೇ ಕಸರತ್ತು ಮಾಡುತ್ತಿದ್ದಾರೆ ಎಂಬ ಅನುಮಾನ ಮೂಡುತ್ತಿದೆ. ಇದರ ಬಗ್ಗೆ ರಾಜ್ಯ ಜೆಡಿಎಸ್ ಘಟಕ ಟ್ವೀಟ್ ಮೂಲಕ ಆರೋಪ ಮಾಡಿದೆ.
ಡಬಲ್ ಆಕ್ಟಿಂಗ್ ಡಿಕೆ ಶಿವಕುಮಾರ್ 2019ರಲ್ಲಿ ಸಮ್ಮಿಶ್ರ ಸರ್ಕಾರ ಉರುಳಿಸಲು ಬೆನ್ನಿಗೆ ಚೂರಿ ಹಾಕಿ ಎಂತಹ "ದ್ವಿಪಾತ್ರ ಅಭಿನಯ" ಮಾಡಿದ್ದೆ ಎಂಬುದು ಎಲ್ಲರಿಗೂ ಮನವರಿಕೆಯಾಗಿದೆ. ಈಗ ಕುರ್ಚಿಗಾಗಿ ಬೆಂಬಲಿತ ಶಾಸಕರನ್ನು ದೆಹಲಿಗೆ ಕಳಿಸಿ, ಬಹಿರಂಗ ಹೇಳಿಕ ಕೊಡಿಸಿ ಬ್ಲ್ಯಾಕ್ ಮೇಲ್ ಮಾಡುತ್ತಿರುವುದು ಯಾರು ?
ಬೆಂಬಲಿಗರಿಗೆ ನೋಟೀಸ್ ಕೊಡುವ ನಾಟಕ ಮಾಡುತ್ತಿರುವುದು ಯಾರು ? ಈ ನಿಮ್ಮ "ದ್ವಿಪಾತ್ರ ಅಭಿನಯ"ವನ್ನು ರಾಜ್ಯದ ಜನರು ನೋಡುತ್ತಿದ್ದಾರೆ ಡಬಲ್ ಗೇಮ್ ಡಿಕೆಶಿ ಎಂದು ಅರೋಪಿಸಿದೆ.