ಬೆಂಗಳೂರು: ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ನಡುವೆ ಎರಡನೇ ಬಾರಿಗೆ ಬ್ರೇಕ್ ಫಾಸ್ಟ್ ಮೀಟಿಂಗ್ ನಡೆಸಲು ಮುಂದಾಗಿದ್ದಾರೆ. ಅಷ್ಟಕ್ಕೂ ಎರಡನೇ ಬಾರಿಗೆ ಇಬ್ಬರೂ ಬ್ರೇಕ್ ಫಾಸ್ಟ್ ಮೀಟಿಂಗ್ ಮಾಡುತ್ತಿರುವುದು ಯಾಕೆ ನೋಡಿ.
ರಾಜ್ಯದಲ್ಲಿ ನಡೆಯುತ್ತಿರುವ ಕುಸ್ತಿ ಕದನ ಏನಿಲ್ಲಾ ಏನಿಲ್ಲಾ ಅಂತಾನೇ ಒಳಗೊಳಗೇ ಎಲ್ಲವೂ ನಡೆಯುತ್ತಿರುವುದು ಪಕ್ಕಾ ಆಗಿದೆ. ಮೊನ್ನೆಯಷ್ಟೇ ಹೈಕಮಾಂಡ್ ಹೇಳಿದೆ ಎಂದು ಬ್ರೇಕ್ ಫಾಸ್ಟ್ ಮೀಟಿಂಗ್ ಮಾಡಿದ್ದ ಸಿದ್ದರಾಮಯ್ಯ, ಡಿಕೆಶಿ ಬಳಿಕ ಮಾಧ್ಯಮಗಳ ಮುಂದೆ ಹೈಕಮಾಂಡ್ ಹೇಳಿದ ಹಾಗೆ ಕೇಳ್ತೇವೆ, ನಮ್ಮ ನಡುವೆ ಭಿನ್ನಾಬಿಪ್ರಾಯವಿಲ್ಲ ಎಂದು ಹೇಳಿಕೊಂಡಿದ್ದರು.
ಆದರೆ ಒಳಗೊಳಗೇ ನಾಯಕತ್ವ ಬದಲಾವಣೆ ವಿಚಾರ ಬೂದಿ ಮುಚ್ಚಿ ಕೆಂಡದಂತಿದೆ. ಇದೀಗ ದೆಹಲಿಯಲ್ಲಿ ಸೋನಿಯಾ ಗಾಂಧಿಗೆ ರಾಜ್ಯದ ಪರಿಸ್ಥಿತಿ ಬಗ್ಗೆ ಮಲ್ಲಿಕಾರ್ಜುನ ಖರ್ಗೆಗೆ ವಿವರಣೆ ನೀಡಿದ್ದಾರೆ. ಇದರ ನಡುವೆಯೇ ಈಗ ಮತ್ತೊಮ್ಮೆ ಸಿದ್ದು-ಡಿಕೆಶಿ ಬ್ರೇಕ್ ಫಾಸ್ಟ್ ಮೀಟಿಂಗ್ ಮಾಡುತ್ತಿದ್ದಾರೆ.
ಹೀಗಾಗಿ ಪರಿಸ್ಥಿತಿ ಇನ್ನೂ ತಿಳಿಗೊಂಡಿಲ್ಲ ಎನ್ನುವುದು ಸ್ಪಷ್ಟ. ಮತ್ತೊಂದು ಸುತ್ತಿನ ಮಾತುಕತೆ ಮೂಲಕ ಒಳಗಿನ ಅಸಮಾಧಾನಗಳಿಗೂ ತೆರೆ ಎಳೆಯಿರಿ ಎಂದು ವರಿಷ್ಠರಿಂದ ಸೂಚನೆ ಬಂದಿದೆ ಎನ್ನಲಾಗಿದೆ. ಇಬ್ಬರ ನಡುವಿನ ಅಸಮಾಧಾನಗಳೇನೇ ಇದ್ದರೂ ಮಾತನಾಡಿ ಬಗೆಹರಿಸಲು ಮತ್ತೊಂದು ಸುತ್ತಿನ ಸಭೆ ನಡೆಸಲಾಗುತ್ತಿದೆ ಎನ್ನಲಾಗಿದೆ.