ನವದೆಹಲಿ: ಕರ್ನಾಟಕದ ಸಿಎಂ ಕುರ್ಚಿ ಕದನದ ರಿಪೋರ್ಟ್ ಈಗ ಸೋನಿಯಾ ಮೇಡಂ ಕೈ ತಲುಪಿದೆ. ಮಲ್ಲಿಕಾರ್ಜುನ ಖರ್ಗೆ ಜೊತೆ ಸೋನಿಯಾ ಗಾಂಧಿ ಮಹತ್ವದ ಮೀಟಿಂಗ್ ಮಾಡಿದ್ದಾರೆ.
ಸೋನಿಯಾ ಗಾಂಧಿ ಮೊನ್ನೆಯಷ್ಟೇ ವಿದೇಶದಿಂದ ಬಂದಿದ್ದರು. ಅದಕ್ಕಿಂತ ಮೊದಲೇ ಕೆಸಿ ವೇಣುಗೋಪಾಲ್ ಸಿಎಂ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಗೆ ಕರೆ ಮಾಡಿ ಬ್ರೇಕ್ ಫಾಸ್ಟ್ ಮೀಟಿಂಗ್ ಮಾಡುವಂತೆ ಹೇಳಿದ್ದರು. ಅದರಂತೆ ಸಭೆ ನಡೆದು ಇಬ್ಬರೂ ನಾಯಕರು ಭಿನ್ನಾಭಿಪ್ರಾಯವಿಲ್ಲ ಎಂದು ಘೋಷಿಸಿದ್ದಾರೆ.
ಆದರೆ ಒಳಗೊಳಗೇ ಸಿಎಂ ಕುರ್ಚಿ ಕದನ ಮುಂದುವರಿದಿದೆ ಎನ್ನುವುದಕ್ಕೆ ಈಗ ಸೋನಿಯಾ ಗಾಂಧಿ ಮತ್ತು ಖರ್ಗೆ ನಡುವಿನ ಮೀಟಿಂಗ್ ಸಾಕ್ಷಿ. ದೆಹಲಿಯಲ್ಲಿ ನಿನ್ನೆ ತಮ್ಮ ನಿವಾಸದಲ್ಲಿ ಸೋನಿಯಾ ಜೊತೆ ಖರ್ಗೆ ಸುದೀರ್ಘ ಚರ್ಚೆ ನಡೆಸಿದ್ದಾರೆ. ಈ ವೇಳೆ ಸೋನಿಯಾ ಗಾಂಧಿಗೆ ರಾಜ್ಯದ ನಾಯಕರ ಅಭಿಪ್ರಾಯಗಳನ್ನು ಖರ್ಗೆ ಸಲ್ಲಿಸಿದ್ದಾರೆ.
ಇದೀಗ ಕರ್ನಾಟಕದ ರಿಪೋರ್ಟ್ ಸೋನಿಯಾ ಮೇಡಂ ಕೈಯಲ್ಲಿದೆ. ಇದೀಗ ರಾಜ್ಯದ ಗೊಂದಲಕ್ಕೆ ಸ್ವತಃ ಸೋನಿಯಾ ಗಾಂಧಿಯವರೇ ತೆರೆ ಎಳೆಯುವ ಸಾಧ್ಯತೆಯಿದೆ. ಸದ್ಯಕ್ಕೆ ರಾಜ್ಯದ ಕುಸ್ತಿ ಕದನ ತಣ್ಣಗಾಗಿದ್ದು, ಅಧಿವೇಶನದ ಬಳಿಕ ಮತ್ತೆ ಭುಗಿಲೇಳಲಿದೆ. ಹೀಗಾಗಿ ಅದಕ್ಕೆ ಮೊದಲು ಸೋನಿಯಾ ಏನು ತೀರ್ಮಾನ ತೆಗೆದುಕೊಳ್ಳುತ್ತಾರೆ ನೋಡಬೇಕಿದೆ.