ಬೆಂಗಳೂರು: ಕಳೆದ ಒಂದು ವಾರದಿಂದ ಸಿಎಂ ಕುರ್ಚಿಗಾಗಿ ನಡೆಯುತ್ತಿದ್ದ ಫೈಟ್ ಈಗ ಒಂದೇ ಮೀಟಿಂಗ್ ನಿಂದ ತಣ್ಣಗಾಗಿದೆ. ಇದರ ಹಿಂದೆ ಭಾರೀ ದೊಡ್ಡ ಸೀಕ್ರೆಟ್ ಇದೆ ಎಂದು ವಿಶ್ಲೇಷಿಸಲಾಗುತ್ತಿದೆ.
ಒಂದು ವಾರದಿಂದ ನಡೆಯುತ್ತಿದ್ದ ಕುರ್ಚಿ ಫೈಟ್ ಒಂದೇ ದಿನದಲ್ಲಿ ಇಬ್ಬರೂ ಕಾಂಪ್ರಮೈಸ್ ಮಾಡಿಕೊಂಡು ತಣ್ಣಗಾದಾಗ ಎಲ್ಲರಿಗೂ ಅಚ್ಚರಿಯಾಗಿದೆ. ಆದರೆ ಇದರ ಹಿಂದಿನ ಲೆಕ್ಕಾಚಾರವೇ ಬೇರೆಯೇ ಇದೆ ಎನ್ನುವುದು ಈಗ ಕೇಳಿಬರುತ್ತಿರುವ ಸುದ್ದಿ.
ನಾಯಕತ್ವದ ವಿಚಾರವಾಗಿ ವಿವಾದ ಮಾಡಿಕೊಳ್ಳಲು ಇದು ಸೂಕ್ತ ಸಮಯವಲ್ಲ ಎಂಬ ಸಂದೇಶ ಹೈಕಮಾಂಡ್ ನಿಂದ ಬಂದಿದೆ ಎನ್ನಲಾಗಿದೆ. ಈಗ ಕುರ್ಚಿಗಾಗಿ ಕಿತ್ತಾಡುತ್ತಿದ್ದರೆ ಪಕ್ಷಕ್ಕೆ ಡ್ಯಾಮೇಜ್ ಎಂಬ ಸಂದೇಶ ವರಿಷ್ಠರು ನೀಡಿದ್ದಾರೆ ಎನ್ನಲಾಗಿದೆ.
ಯಾಕೆಂದರೆ ಮುಂದಿನ ವಾರದಿಂದ ಲೋಕಸಭೆ ಚಳಿಗಾಲ ಅಧಿವೇಶನ ಆರಂಭವಾಗುತ್ತದೆ. ಡಿಸೆಂಬರ್ 8 ರಿಂದ ಕರ್ನಾಟಕದಲ್ಲಿ ವಿಧಾನಸಭೆ ಅಧಿವೇಶನ ಆರಂಭವಾಗುತ್ತದೆ. ಈ ಸಂದರ್ಭದಲ್ಲಿ ಕುರ್ಚಿಗಾಗಿ ರಾಜ್ಯ ಸರ್ಕಾರದಲ್ಲೇ ಕಿತ್ತಾಟ ನಡೆಯುತ್ತಿದ್ದರೆ ಇದು ಬಿಜೆಪಿ ಮತ್ತು ಮಿತ್ರ ಪಕ್ಷಗಳಿಗೆ ದೊಡ್ಡ ಅಸ್ತ್ರವಾಗಲಿದೆ. ಹೀಗಾಗಿ ಸದ್ಯಕ್ಕೆ ಅಧಿವೇಶನದಲ್ಲಿ ಎದುರಾಳಿ ಪಕ್ಷವನ್ನು ಎದುರಿಸುವ ಬಗ್ಗೆ ಯೋಜನೆ ರೂಪಿಸಬೇಕಿದೆ. ಇಂತಹ ಸಂದರ್ಭದಲ್ಲಿ ಇಲ್ಲದ ರಗಳೆಗಳು ಬೇಡ ಎಂದು ಹೈಕಮಾಂಡ್ ನಿಂದ ಸೂಚನೆ ಬಂದಿರುವ ಕಾರಣಕ್ಕೇ ಇಬ್ಬರೂ ಮಾತನಾಡಿಕೊಂಡು ಸದ್ಯಕ್ಕೆ ಕಾಂಪ್ರಮೈಸ್ ಆಗಿದ್ದಾರೆ ಎನ್ನಲಾಗುತ್ತಿದೆ.