Publish Date: Sat, 29 Nov 2025 (17:04 IST)
Updated Date: Sat, 29 Nov 2025 (17:08 IST)
ಬೆಂಗಳೂರು: ಒಂದು ಪ್ಲೇಟ್ ಇಡ್ಲಿಗೇ ಮ್ಯಾಟರ್ ಕ್ಲೋಸ್ ಆಯ್ತಾ ಎಂದು ಬ್ರೇಕ್ ಫಾಸ್ಟ್ ಮೀಟಿಂಗ್ ಬಳಿಕ ಭಿನ್ನಾಭಿಪ್ರಾಯಗಳೇ ಇಲ್ಲ ಎಂದ ಡಿಕೆ ಶಿವಕುಮಾರ್ ಗೆ ನೆಟ್ಟಿಗರು ಕಾಲೆಳೆದಿದ್ದಾರೆ.
ರಾಜ್ಯದಲ್ಲಿ ಕಳೆದ ಒಂದು ವಾರದಿಂದ ಕುರ್ಚಿ ಫೈಟ್ ಜೋರಾಗಿತ್ತು. ಹೈಕಮಾಂಡ್ ಅಂಗಳಕ್ಕೂ ಇದು ತಲುಪಿತ್ತು. ಮಾಧ್ಯಮಗಳು, ಸೋಷಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆಯಾಗುತ್ತಿತ್ತು. ಎರಡೂ ಬಣದ ಕಾಂಗ್ರೆಸ್ ಶಾಸಕರು ದೆಹಲಿ, ಬೆಂಗಳೂರು ಎಂದು ಓಡಾಡುತ್ತಿದ್ದರು.
ಆದರೆ ಹೈಕಮಾಂಡ್ ಹೇಳಿದೆ ಎಂದು ಇಂದು ಸಿಎಂ ಸಿದ್ದರಾಮಯ್ಯನವರು ಡಿಕೆಶಿಯನ್ನು ಬ್ರೇಕ್ ಫಾಸ್ಟ್ ಗೆ ಕರೆದು ಮೀಟಿಂಗ್ ಮಾಡಿದ್ದೇ ಮಾಡಿದ್ದು. ಹೊರಗೆ ಬರುವಾಗ ಎಲ್ಲವೂ ಸುಖಾಂತ್ಯವಾದಂತೆ ಇಬ್ಬರೂ ನಗು ನಗುತ್ತಲೇ ಹೊರಬಂದರು. ಬಳಿಕ ಮಾಧ್ಯಮಗಳ ಮುಂದೆ ಹೈಕಮಾಂಡ್ ಹೇಳಿದಂತೆ ನಾವಿಬ್ಬರೂ ಕೇಳುತ್ತೇವೆ. ರಾಜಕೀಯವಾಗಿ ನಮ್ಮಿಬ್ಬರದ್ದೂ ಒಂದೇ ತೀರ್ಮಾನ ಎಂದೆಲ್ಲಾ ಹೇಳಿಕೆ ನೀಡಿದ್ದಾರೆ.
ಇದಕ್ಕೆ ನೆಟ್ಟಿಗರು ಡಿಕೆಶಿ ಕಾಲೆಳದಿದ್ದಾರೆ. ಡಿಕೆಶಿ ಟ್ವೀಟ್ ಗೆ ಕಾಮೆಂಟ್ ಮಾಡಿರುವ ನೆಟ್ಟಿಗರು ಬರೀ ಒಂದು ಪ್ಲೇಟ್ ಇಡ್ಲಿ, ವಡೆಗೆ ಮ್ಯಾಟರ್ ಸೆಟ್ಲ್ ಆಗುತ್ತೆ ಎಂದರೆ ಆವತ್ತೇ ಎಂಟಿಆರ್, ಚಾಲುಕ್ಯಗೆ ಹೋಗಿ ಇಬ್ಬರೂ ಇಡ್ಲಿ, ವಡೆ ತಿಂದು ಬರಬಹುದಿತ್ತು ಎಂದು ಒಬ್ಬರು ತಮಾಷೆ ಮಾಡಿದ್ದಾರೆ. ಮತ್ತೊಬ್ಬರು ಹಾಗಿದ್ದರೆ ಕಳೆದ ಒಂದು ವಾರದಿಂದ ಮಾತು ಮುಖ್ಯ ಎಂದೆಲ್ಲಾ ಹೇಳಿದ್ದು ನಾಟಕನಾ ಎಂದು ಪ್ರಶ್ನೆ ಮಾಡಿದ್ದಾರೆ.