Publish Date: Sat, 29 Nov 2025 (16:29 IST)
Updated Date: Sat, 29 Nov 2025 (16:31 IST)
ಮಂಡ್ಯ: ಇಂದು ಬೆಳಗ್ಗೆ ಸಿಎಂ ನಿವಾಸದಲ್ಲಿ ಸಿದ್ದರಾಮಯ್ಯ ಜತೆ ಬ್ರೇಕ್‌ಫಾಸ್ಟ್ ಸವಿದ ಬೆನ್ನಲ್ಲೇ ಡಿಸಿಎಂ ಡಿಕೆ ಶಿವಕುಮಾರ್ ಅವರು ದೇವರ ಮೊರೆ ಹೋಗಿದ್ದಾರೆ.
ಮಂಡ್ಯದ ಕೆಆರ್ ಪೇಟೆಯ ಭೂ ವರಹಾನಾಥ ದೇವಸ್ಥಾನಕ್ಕೆ ಡಿಸಿಎಂ ಡಿಕೆ ಶಿವಕುಮಾರ್ ಅವರು ಫ್ಯಾಮಿಲಿ ಜತೆ ಭೇಟಿ ನೀಡಿದ್ದಾರೆ.
ರಾಜ್ಯ ರಾಜಕಾರಣದಲ್ಲಿ ಸಿಎಂ ಕುರ್ಚಿಗಾಗಿ ಡಿಕೆ ಶಿವಕುಮಾರ್ ಅವರು ಪಟ್ಟು ಹಿಡಿದ ದಿನದಿಂದ ನಾಡಿನ ಫವರ್‌ಫುಲ್ ದೇವರ ಮೊರೆ ಹೋಗುತ್ತಲೇ ಇದ್ದಾರೆ. ಈಚೆಗೆ ಡಿಕೆಶಿ ನಿವಾಸಕ್ಕೆ ಸ್ವಾಮೀಜಿಗಳು, ನಾಗಸಾಧುಗಳು, ಅಜ್ಜಯ್ಯನ ಗದ್ದುಗೆ ಆಗಮನದ ಬೆನ್ನಲ್ಲೇ ಇದೀಗ ಮಂಡ್ಯದ ಫವರ್‌ಫುಲ್ ದೇವರ ದರ್ಶನ ಮಾಡಿದ್ದಾರೆ.
ಸದ್ಯ ಸಿಎಂ ಕುರ್ಚಿಗಾಗಿ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ನಡುವೆ ಪೈಪೋಟಿ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಹೈಕಮಾಂಡ್ ಸೂಚನೆಯಂತೆ ಇಂದು ಮುಖ್ಯಮಂತ್ರಿ ನಿವಾಸದಲ್ಲಿ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಒಟ್ಟಿಗೆ ಬ್ರೇಕ್‌ಫಾಸ್ಟ್ ಸವಿದಿದ್ದಾರೆ. ಈ ಮೂಲಕ ತಮ್ಮಿಬ್ಬರ ನಡುವೆ ಯಾವುದೇ ಭಿನ್ನಾಭಿಪ್ರಾಯವಿಲ್ಲ ಎಂದು ಸಂದೇಶ ಸಾರುವ ಯತ್ನವಾಗಿದೆ.