Select Your Language

Notifications

webdunia
webdunia
webdunia
webdunia

ದೇವರಿಗೆ ಬಿಟ್ಟಿದ್ದ ಗೋವಿನ ಕಾಲು ಕಡಿದ ಪಾಪಿಗಳು, ಕ್ರಮಕ್ಕೆ ಒತ್ತಾಯ

Yalaburga Crime Case, Yalaburga Cow Case, Karnataka Cow Attack Case

Sampriya

ಯಲಬುರ್ಗಾ , ಸೋಮವಾರ, 24 ನವೆಂಬರ್ 2025 (18:41 IST)
ಯಲಬುರ್ಗಾ: ​ದೇವರಿಗೆ ಬಿಟ್ಟಿದ್ದ ಗೋವಿನ ಕಾಲನ್ನು ಪಾಪಿಗಳು ಕೊಡಲಿಯಿಂದ ಕಡಿದು ವಿಕೃತಿ ಮೆರೆದ ಘಟನೆ ತಾಲ್ಲೂಕಿನ ಮಾಟರಂಗಿ ಗ್ರಾಮದಲ್ಲಿ ನಡೆದಿದೆ. ಈ ಘಟನೆ ಸಂಬಂಧ ಗ್ರಾಮಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಗೋವನ್ನು ಮಾಟರಂಗಿ ಗ್ರಾಮದ ಮಾರುತೇಶ್ವರ ದೇವರಿಗೆ ಹದಿನೈದು ವರ್ಷಗಳ ಹಿಂದೆ ಬಿಡಲಾಗಿತ್ತು. ಇನ್ನೂ ಗ್ರಾಮಸ್ಥರು ಇದನ್ನು ಪೂಜನೀಯ ಭಾವನೆಯಿಂದ ಕಾಣುತ್ತಿದ್ದರು. 

ಆದರೆ ರವಿವಾರ ಈ ಗೋವು ಮಾಟರಂಗಿ ಗ್ರಾಮದ ಪಕ್ಕದಲ್ಲಿರುವ ಲಿಂಗನಬಂಡಿ ರಮೇಶ್ ಹಡಪದ ಎನ್ನುವವರ ಜಮೀನಿನಲ್ಲಿ ಮೇಯಲು ಹೋಗಿತ್ತು. ಈ ಸಂದರ್ಭದಲ್ಲಿ ಕೊಡಲಿಯಿಂದ ಗೋವಿನ ಕಾಲನ್ನು ಕಡಿಯಲಾಗಿದೆ.

ಇನ್ನೂ ಭಾರೀ ಆಕ್ರೋಶಕ್ಕೆ ಕಾರಣರಾಗಿರುವ  ಈ ಘಟನೆ ಸಂಬಂಧ ಕ್ರಮಕ್ಕೆ ಒತ್ತಾಯ ವ್ಯಕ್ತವಾಗಿದೆ. ದೇವರ ಹೆಸರಿನಲ್ಲಿ ಬಿಟ್ಟಿದ್ದ ಗೋವಿನ ಕಾಲನ್ನು ಕಡಿದಿರುವ ಆರೋಪವನ್ನು ಜಮೀನಿನ ಮಾಲೀಕರಾದ ಲಿಂಗನಬಂಡಿ ರಮೇಶ್ ಅವರ ಮೇಲೆ ಗ್ರಾಮಸ್ಥರು ಹೊರಿಸಿದ್ದಾರೆ. ​

ದೂರು: ಯಲಬುರ್ಗಾ ಪೋಲಿಸ್ ಠಾಣೆಗೆ ತೆರಳಿ ಗ್ರಾಮಸ್ಥರು ದೂರು ನೀಡಿದ್ದಾರೆ, ದೂರು ನೀಡಲು ಬಂದಾಗ ವಿಳಂಬ ಮಾಡುತ್ತಿದ್ದಾರೆ, ಪ್ರತ್ಯಕ್ಷದರ್ಶಿ ಸಾಕ್ಷಿ ಕೊಡಿ ಎಂದು ವಿನಾಕಾರಣ ವಿಳಂಬ ಮಾಡುತ್ತಿದ್ದಾರೆ ಎಂದು ಮಾಟರಂಗಿ ಗ್ರಾಮಸ್ಥರು ಪೋಲಿಸರ ವಿರುದ್ದ ತಮ್ಮ ಅಸಮಾಧಾನ ವ್ಯಕ್ತಪಡಿಸಿದರು.

Share this Story:

Follow Webdunia kannada

ಮುಂದಿನ ಸುದ್ದಿ

ರಾಜ್ಯ ನಾಯಕತ್ವ ಬದಲಾವಣೆ ಬಗ್ಗೆ ಸಚಿವ ಮಧು ಬಂಗಾರಪ್ಪ ಸ್ಫೋಟಕ ಹೇಳಿಕೆ