ಹಾಸನ: ರಾಜ್ಯ ಕಾಂಗ್ರೆಸ್ ಸರ್ಕಾರ ಜಾರಿ ಮಾಡಿರುವ ಗ್ಯಾರಂಟಿ ಅಡಿಯಲ್ಲಿ ಕೋಟಿ ಕೋಟಿ ಹಣ ಖರ್ಚು ಮಾಡುತ್ತಿರುವುದೇ ಸಮಾನತೆ ತರಲೆಂದು ಸಿಎಂ ಸಿದ್ದರಾಮಯ್ಯ ಹೇಳಿದರು.
ವಿಪಕ್ಷಗಳು ಕಾಂಗ್ರೆಸ್ ಸರ್ಕಾರ ಗ್ಯಾರಂಟಿ ಯೋಚನೆ ಬಗ್ಗೆ ಟೀಕೆ ಮಾಡುತ್ತಲೇ ಬಂದಿದೆ. ಈ ವಿಚಾರವಾಗಿ ಪ್ರತಿಕ್ರಿಯಿಸಿದ ಸಿಎಂ ಅವರು, ಶಕ್ತಿ ಯೋಜನೆ ವೇಸ್ಟ್ ಅಂತಾರೆ. ನಾವು ದಡ್ಡರಲ್ಲ ಒಂದು ಲಕ್ಷಕ್ಕೂ ಹೆಚ್ಚು ಕೋಟಿ ರೂ. ಹಣ ಖರ್ಚು ಮಾಡುವುದು ಸಮಾನತೆ ತರಲು. ಲೋಕಸಭಾ ಚುನಾವಣೆ ಆದ ಮೇಲೆ ಗ್ಯಾರಂಟಿ ನಿಲ್ಲಿಸುತ್ತಾರೆ ಎಂದು ಹೇಳಿದ್ದರು. ಈ ಎಲ್ಲ ಟೀಕೆಗಳಿಗೆ ಜನರೇ ಉತ್ತರಿಸಬೇಕೆಂದರು.
ಇನ್ನೂ ಶ್ರವಣಬೆಳಗೊಳದಲ್ಲಿ ಉದ್ಯಾನವನ ಮಾಡಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ. ಇನ್ನೂ ನಾನು ಯಾವುದೇ ವಿಚಾರದಲ್ಲಿ ಮಾತು ಕೊಟ್ಮೇಲೆ ಅದನ್ನು ಮಾಡೇ ಮಾಡ್ತೀನಿ ಎಂದರು.
ಡಿಕೆಶಿ ಯಾವಾಗಲೂ ಹೇಳುತ್ತಿರುತ್ತಾರೆ, ಟೀಕೆಗಳು ಸಾಯುತ್ತವೆ, ಮಾಡಿರುವ ಕೆಲಸಗಳು ಉಳಿಯುತ್ತವೆ ಎಂದಿದ್ದಾರೆ