ಬೆಂಗಳೂರು: ಅಲಿಬಾಬ ಮತ್ತು 40 ಕಳ್ಳರ ಕತೆಯನ್ನು ನಿಜವಾಗಿಯೂ ಸಿದ್ದರಾಮಯ್ಯ ಸರ್ಕಾರದ ರೂಪದಲ್ಲೇ ನೋಡುತ್ತಿದ್ದೇವೆ ಎಂದು ಆರ್ ಅಶೋಕ್ ವಾಗ್ದಾಳಿ ನಡೆಸಿದ್ದಾರೆ.
ಸರ್ಕಾರಿ ಶಾಲೆಗಳಲ್ಲಿ ಲ್ಯಾಪ್ ಟಾಪ್, ಪ್ರಾಜೆಕ್ಟರ್ ಖರೀದಿಯಲ್ಲಿ ಅವ್ಯವಹಾರವಾಗಿದೆ ಎಂಬ ಪತ್ರಿಕಾ ವರದಿಗಳನ್ನು ಉಲ್ಲೇಖಿಸಿ ಆರ್ ಅಶೋಕ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ರಾಜ್ಯ ಸರ್ಕಾರದ ಪ್ರತಿ ಇಲಾಖೆಯಲ್ಲೂ ಅಕ್ರಮ, ಅವ್ಯವಹಾರ ತುಂಬಿ ತುಳುಕುತ್ತಿದೆ, ಭ್ರಷ್ಟಾಚಾರ ತಾಂಡವವಾಡುತ್ತಿದೆ ಎಂದು ಮಾನ್ಯ ಉಪಲೋಕಾಯುಕ್ತರ ಹೇಳಿದ್ದು ಅಕ್ಷರಶಃ ನಿಜ.
ಸರ್ಕಾರಿ ಶಾಲೆಗಳಲ್ಲಿ ಖರೀದಿ ಮಾಡಿರುವ ಲ್ಯಾಪ್ಟಾಪ್, ಎಲ್ ಇಡಿ ಪ್ರೊಜೆಕ್ಟರ್, ಯುಪಿಎಸ್ ಸೇರಿದಂತೆ ಎಲೆಕ್ಟ್ರಾನಿಕ್ ಉಪಕರಣಗಳಲ್ಲಿ ಕೆಟಿಟಿಪಿ ನಿಯಮ ಉಲ್ಲಂಘನೆ ಮಾಡಿ ಲಕ್ಷಾಂತರ ರೂಪಾಯಿ ಅವ್ಯವಹಾರ ನಡೆಸಿರುವ ಸತ್ಯಾಂಶ ಲೋಕಾಯುಕ್ತ ದಾಳಿಯಲ್ಲಿ ಪತ್ತೆಯಾಗಿದೆ.
ಸ್ವಾಮಿ ಸಿಎಂ ಸಿದ್ದರಾಮಯ್ಯನವರೇ, ಆಲಿ ಬಾಬಾ 40 ಕಳ್ಳರ ಕಥೆ ಕೇಳಿದ್ದೆವು. ಈಗ ನಿಮ್ಮ ಭ್ರಷ್ಟ ಸಂಪುಟದಲ್ಲಿ ಸಿದ್ದರಾಮಯ್ಯ ಮತ್ತು 34 ಕಳ್ಳರು ಎನ್ನುವಂತಾಗಿದೆ.
ದಿನಕ್ಕೊಂದು ಹಗರಣ, ದಿನಕ್ಕೊಂದು ಅಕ್ರಮ, ದಿನಕ್ಕೊಂದು ಅವ್ಯವಹಾರ. ದಿನಬೆಳಗಾದರೆ ಪತ್ರಿಕೆಗಳಲ್ಲಿ ಈ ಸುದ್ದಿ ನೋಡಿ ನೋಡಿ ನಿಮ್ಮ ಕಾಂಗ್ರೆಸ್
ಸರ್ಕಾರದ ವಿರುದ್ಧ ಕರ್ನಾಟಕದ ಜನತೆ ರೋಸಿ ಹೋಗಿದ್ದಾರೆ. ಇನ್ನೆಷ್ಟು ದಿನ ಸ್ವಾಮಿ ಈ ಭಂಡ ಬಾಳು ರಾಜನಾಮೆ ಕೊಟ್ಟು ರಾಜ್ಯವನ್ನು ಉಳಿಸಿ ಎಂದಿದ್ದಾರೆ.