ಬೆಂಗಳೂರು: ರಾಜ್ಯದಲ್ಲಿ ಕುರ್ಚಿ ಕದನದ ಬೆನ್ನಲ್ಲೇ ಸಚಿವರಿಗೆ ಸಿಎಂ ಸಿದ್ದರಾಮಯ್ಯ ಸತತವಾಗಿ ಮೀಟಿಂಗ್ ಮಾಡಿ ಖಡಕ್ ಸೂಚನೆಯೊಂದನ್ನು ರವಾನಿಸಿದ್ದಾರೆ.
ರಾಜ್ಯದಲ್ಲಿ ಸಿಎಂ ಸ್ಥಾನಕ್ಕಾಗಿ ಪೈಪೋಟಿ ಇಲ್ಲವೆಂದರೂ ತೆರೆಮರೆಯೊಳಗೆ ಡಿಕೆಶಿ ಮತ್ತು ಸಿದ್ದು ಬಣದ ನಾಯಕರು ತಮ್ಮ ನಾಯಕನ ಪರವಾಗಿ ಲಾಬಿ ಮುಂದುವರಿಸಿದ್ದಾರೆ. ಇದರ ನಡುವೆ ಸಚಿವರ ಜೊತೆ ಸಭೆ ನಡೆಸಿರುವ ಸಿಎಂ ಸಿದ್ದರಾಮಯ್ಯ ಖಡಕ್ ಸೂಚನೆ ಕೊಟ್ಟಿದ್ದಾರೆ.
ಸೋಮವಾರದಿಂದ ಬೆಳಗಾವಿ ಅಧಿವೇಶನ ಆರಂಭವಾಗಲಿದ್ದು, ರಾಜ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳಲು ವಿಪಕ್ಷಗಳಿಗೆ ಸಾಕಷ್ಟು ಅಸ್ತ್ರವಿದೆ. ಹೀಗಾಗಿ ವಿಪಕ್ಷಗಳನ್ನು ಎದುರಿಸಲು ಸಜ್ಜಾಗಿ ಎಂದು ಸಿಎಂ ಕರೆ ಕೊಟ್ಟಿದ್ದಾರೆ.
ನಾಯಕತ್ವ ವಿಚಾರವಾಗಿ ಬಹಿರಂಗವಾಗಿ ಬೇಕಾಬಿಟ್ಟಿ ಹೇಳಿಕೆ ನೀಡಿ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಬೇಡಿ. ಸದನಕ್ಕೆ ಯಾರೂ ಗೈರಾಗಬೇಡಿ. ಬಿಜೆಪಿಯ ಯಾವುದೇ ಆರೋಪಗಳನ್ನು ಎದುರಿಸಲು ಸಿದ್ಧರಾಗಿ ಎಂದು ಸಿದ್ದರಾಮಯ್ಯ ಖಡಕ್ ಸೂಚನೆ ಕೊಟ್ಟಿದ್ದಾರೆ.