ಬೆಂಗಳೂರು: ರಾಜ್ಯದಲ್ಲಿ ಕುರ್ಚಿ ಕದನಕ್ಕೆ ಡಿಕೆ ಶಿವಕುಮಾರ್, ಸಿಎಂ ಸಿದ್ದರಾಮಯ್ಯ ವಿರಾಮ ಹಾಕಿದರೂ ಇವರು ಮಾತ್ರ ಸುಮ್ಮನಿರಲು ಬಿಡ್ತಿಲ್ಲ. ಅವರು ಯಾರು ನೋಡಿ.
ರಾಜ್ಯ ಕಾಂಗ್ರೆಸ್ ನಲ್ಲಿ ಡಿಕೆ ಶಿವಕುಮಾರ್, ಸಿದ್ದರಾಮಯ್ಯ ನಡುವೆ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ ಎಂದರೂ ಒಳಗೊಳಗೇ ಕುರ್ಚಿ ಕಸರತ್ತು ಇನ್ನೂ ಮುಂದುವರಿದಿದೆ. ಹೀಗಾಗಿ ಸಿಎಂ ಬದಲಾವಣೆ ವಿಚಾರ ಜೀವಂತವಾಗಿಯೇ ಇದೆ.
ಅಷ್ಟಕ್ಕೂ ಇದನ್ನು ಜೀವಂತವಾಗಿಟ್ಟಿರುವವರು ಇಬ್ಬರೂ ನಾಯಕರ ಬೆಂಬಲಿಗ ಶಾಸಕರು, ಸಚಿವರು. ನಾವು ಬ್ರದರ್ಸ್ ಎಂದು ಡಿಕೆಶಿ-ಸಿದ್ದು ಹೇಳಿದರೂ ಅವರ ಬೆಂಬಲಿಗ ಬಣಗಳು ಮಾತ್ರ ಹೈಕಮಾಂಡ್ ಮಟ್ಟದಲ್ಲಿ ತಮ್ಮ ನಾಯಕನಿಗಾಗಿ ಲಾಬಿ ನಡೆಸುವುದು ನಿಲ್ಲಿಸಿಲ್ಲ. ಹೀಗಾಗಿ ಅನಿವಾರ್ಯವಾಗಿ ಇಬ್ಬರೂ ನಾಯಕರು ತಮ್ಮ ಬೆಂಬಲಿಗರ ಜೊತೆ ಮಾತುಕತೆ ನಡೆಸುತ್ತಿದ್ದಾರೆ. ಬೆಂಬಲಿಗರಿಂದಾಗಿ ಸಿಎಂ ಬದಲಾವಣೆ ವಿಚಾರ ಬೂದಿ ಮುಚ್ಚಿದ ಕೆಂಡದಂತಿದ್ದು ಯಾವಾಗ ಬೇಕಾದರೂ ಮತ್ತೆ ಭುಗಿಲೇಳಬಹುದು.