ಬೆಂಗಳೂರು: ನಾವೆಲ್ಲಾ ರಾಜಕಾರಣ ಮಾಡಿಕೊಂಡು ಮನೆಗೆ ಟೈಮೇ ಕೊಡಲ್ಲ. ನನ್ನ ಮಕ್ಕಳು ಮಾಡಿದ ಸಾಧನೆಯನ್ನು ನಾನು ಆ ವಯಸ್ಸಿನಲ್ಲಿ ಮಾಡಿರಲಿಲ್ಲ ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದ್ದಾರೆ.
ಇಂದು ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ಅಖಿಲ ಕರ್ನಾಟಕ ರಾಜ್ಯ ಸರ್ಕಾರಿ ಮಹಿಳಾ ನೌಕರರ ಸಂಘವು ಆಯೋಜಿಸಿದ ಮಹಿಳಾ ನೌಕರರ ಸಮ್ಮೇಳನದಲ್ಲಿ ಮಾತನಾಡಿದ ಅವರು ಮಹಿಳೆಯರ ಬಗ್ಗೆ ಹಾಡಿ ಹೊಗಳಿದ್ದಾರೆ.
ಎಲ್ಲಾ ಯಶಸ್ವೀ ಪುರುಷನ ಹಿಂದೆ ಮಹಿಳೆಯಿದ್ದಾರೆ ಎನ್ನುತ್ತಾರೆ. ನಾವೆಲ್ಲಾ ರಾಜಕಾರಣ ಮಾಡ್ಕೊಂಡು ಮನೆ ಕಡೆ ಗಮನವೇ ಕೊಡಲ್ಲ. ಮನೆಯಲ್ಲಿ ನಮ್ಮ ಹೆಣ್ಣುಮಕ್ಕಳೇ ಎಲ್ಲಾ ಮ್ಯಾನೇಜ್ ಮಾಡ್ತಾರೆ. ಹೀಗಾಗಿ ಮಹಿಳೆಯರು ಬಹಳ ಮುಖ್ಯ ಪಾತ್ರ ವಹಿಸ್ತಾರೆ.
ನನಗೂ ಇಬ್ಬರು ಹೆಣ್ಣು ಮಕ್ಕಳು. ಅವರು ಈ ವಯಸ್ಸಿನಲ್ಲಿ ಮಾಡಿರುವ ಸಾಧನೆಯನ್ನು ನಾನು ಅವರ ವಯಸ್ಸಿನಲ್ಲಿದ್ದಾಗ ಮಾಡಿರಲಿಲ್ಲ. ಮಹಿಳೆಯರಿಗೆ ನಿಮ್ಮದೇ ಆದ ಪ್ರತ್ಯೇಕ ಸ್ಥಾನವಿದೆ. ನಿಮ್ಮಿಂದನೇ ಸೃಷ್ಟಿ. ಹೀಗಾಗಿ ಭಾರತೀಯ ಸಂಸ್ಕೃತಿಯಲ್ಲಿ ನಿಮ್ಮ ಸ್ಥಾನ ಮಾನದ ಬಗ್ಗೆ ನಮಗೆ ಗೌರವವಿದೆ. ಮಹಿಳೆಯರು ನಾಯಕತ್ವ ವಹಿಸಬೇಕು ಎಂದು ಡಿಕೆಶಿ ಹೇಳಿದ್ದಾರೆ.