ಬೆಂಗಳೂರು: ಇಂದು ಎರಡನೇ ಬಾರಿಗೆ ಬ್ರೇಕ್ ಫಾಸ್ಟ್ ಮೀಟಿಂಗ್ ಮುಗಿಸಿದ ಬಳಿಕ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ್ ಮತ್ತೊಮ್ಮೆ ಜಂಟಿಯಾಗಿ ಮಾಧ್ಯಮಗಳಿಗೆ ಹೇಳಿಕೆ ಬಿಡುಗಡೆ ಮಾಡಿದ್ದಾರೆ.
ರಾಜ್ಯದಲ್ಲಿ ನಡೆಯುತ್ತಿರುವ ಕುಸ್ತಿ ಕದನಕ್ಕೆ ಬ್ರೇಕ್ ಹಾಕಲು ಸಿದ್ದು-ಡಿಕೆಶಿಗೆ ಬ್ರೇಕ್ ಫಾಸ್ಟ್ ಮೀಟಿಂಗ್ ನಡೆಸುವಂತೆ ಹೈಕಮಾಂಡ್ ಹೇಳಿತ್ತು. ಅದರಂತೆ ಇಂದು ಎರಡನೇ ಬಾರಿಗೆ ಇಬ್ಬರೂ ನಾಯಕರು ಡಿಕೆಶಿ ನಿವಾಸದಲ್ಲಿ ಮೀಟಿಂಗ್ ನಡೆಸಿದ ಬಳಿಕ ಮಾಧ್ಯಮಗಳಿಗೆ ಮಹತ್ವದ ಹೇಳಿಕೆ ನಿಡಿದ್ದಾರೆ.
ನಮ್ಮಲ್ಲಿ ಯಾವುದೇ ಗೊಂದಲ ಇಲ್ಲ. ಶಾಸಕರಿಗೆ ಸಂದೇಶ ನೀಡಿದ್ದೇವೆ. ಎಲ್ಲಾ ಶಾಕರೂ ಒಗ್ಗಟ್ಟಾಗಿವೆ. ವಿಪಕ್ಷಗಳದ್ದು ಖಾಲಿ ಡಬ್ಬ ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ. ಇನ್ನು ಸಿದ್ದರಾಮಯ್ಯ ಕೂಡಾ ಇದೇ ಮಾತನ್ನು ಹೇಳಿದ್ದಾರೆ. ಈವತ್ತಿನ ಮೀಟಿಂಗ್ ನಲ್ಲಿ ನಾವು ಅಸೆಂಬ್ಲಿ ಸೆಷನ್ ಬಗ್ಗೆ ಚರ್ಚೆ ಮಾಡಿದ್ದೇವೆ. ನಾವು ಯಾವಾಗಲೂ ಒಗ್ಗಟ್ಟಾಗಿಯೇ ಇದ್ದೇವೆ. ನಾವಿಬ್ಬರೂ ಬ್ರದರ್ಸ್, ಒಂದೇ ಪಕ್ಷದಲ್ಲಿದ್ದೇವೆ, ಒಂದೇ ಸಿದ್ಧಾಂತವನ್ನು ನಂಬಿಕೊಂಡಿದ್ದೇವೆ. 2028 ಕ್ಕೆ ಕೂಡಾ ಒಟ್ಟಿಗೇ ಕೆಲಸ ಮಾಡಿ ಅಧಿಕಾರಕ್ಕೆ ತರುತ್ತೇವೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.