ಬೆಂಗಳೂರು: ಇಂದು ಸಿಎಂ ಸಿದ್ದರಾಮಯ್ಯ ಜೊತೆ ಡಿಕೆ ಶಿವಕುಮಾರ್ ಎರಡನೇ ಬ್ರೇಕ್ ಫಾಸ್ಟ್ ಮೀಟಿಂಗ್ ಮಾಡುತ್ತಿದ್ದಾರೆ. ಇದಕ್ಕೆ ನೆಟ್ಟಿಗರು ಕಾಲೆಳೆದಿದ್ದು ಬರೀ ಬ್ರೇಕ್ ಫಾಸ್ಟ್ ಯಾಕೆ ಡಿನ್ನರ್ ಪಾರ್ಟಿನೂ ಮಾಡಿ ಎಂದಿದ್ದಾರೆ.
ರಾಜ್ಯದಲ್ಲಿ ನಡೆಯುತ್ತಿರುವ ಕುಸ್ತಿ ಕದನಕ್ಕೆ ಬ್ರೇಕ್ ಹಾಕಲು ಹೈಕಮಾಂಡ್ ಸಿದ್ದು-ಡಿಕೆಶಿಗೆ ಬ್ರೇಕ್ ಫಾಸ್ಟ್ ಮೀಟಿಂಗ್ ಮಾಡಲು ಹೇಳಿದೆ. ಈಗಾಗಲೇ ಸಿಎಂ ಸಿದ್ದರಾಮಯ್ಯ ಮನೆಯಲ್ಲಿ ಒಂದು ಬ್ರೇಕ್ ಫಾಸ್ಟ್ ಮೀಟಿಂಗ್ ನಡೆದಿದೆ. ಬಳಿಕ ಇಬ್ಬರೂ ನಾಯಕರು ನಾವು ಚೆನ್ನಾಗಿದ್ದೇವೆ ಎಂದು ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದರು. ನಾಳೆಯಿಂದ ಎಲ್ಲಾ ಗೊಂದಲಗಳಿಗೂ ಫುಲ್ ಸ್ಟಾಪ್ ಎಂದಿದ್ದರು.
ಆದರೆ ಈಗ ಎರಡೇ ದಿನಕ್ಕೆ ಏನಿಲ್ಲಾ ಏನಿಲ್ಲಾ ಎಂದು ಮತ್ತೊಂದು ಬ್ರೇಕ್ ಫಾಸ್ಟ್ ಮೀಟಿಂಗ್ ಅರೇಂಜ್ ಆಗಿದೆ. ಈ ಬಾರಿ ಡಿಕೆಶಿ ಮನೆಯಲ್ಲಿ ಮೀಟಿಂಗ್ ನಡೆಯಲಿದೆ. ಈ ವಿಚಾರವನ್ನು ಅವರು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು.
ಇದಕ್ಕೆ ನೆಟ್ಟಿಗರು ಕಾಲೆಳೆದಿದ್ದಾರೆ. ಬರೀ ಬ್ರೇಕ್ ಫಾಸ್ಟ್ ಮಾತ್ರ ಯಾಕೆ, ಲಂಚ್, ಡಿನ್ನರ್ ಪಾರ್ಟಿ ಎಲ್ಲಾನೂ ಮಾಡಿ ಎಂದಿದ್ದಾರೆ. ಮತ್ತೊಬ್ಬರು ತಿನ್ನೋದು ಬಿಟ್ರೆ ಬೇರೇನೂ ಇಲ್ವಾ ಎಂದು ಪ್ರಶ್ನೆ ಮಾಡಿದ್ದಾರೆ. ಅಭಿವೃದ್ಧಿ ಬಿಟ್ಟು ಇಂತಹ ಮೀಟಿಂಗ್ ಮಾಡಿಕೊಂಡೇ ಇನ್ನೆರಡು ವರ್ಷ ದೂಡಿ ಎಂದು ಒಬ್ಬರು ಕಿಡಿ ಕಾರಿದ್ದಾರೆ. ಮತ್ತೆ ಹಲವರು ಏನು ಸಾರ್ ಮೆನು, ಏನು ಸ್ಪೆಷಲ್ ಎಂದು ತಮಾಷೆ ಮಾಡಿದ್ದಾರೆ.