ಬೆಂಗಳೂರು: ಡಿಸಿಎಂ ಡಿಕೆ ಶಿವಕುಮಾರ್ ಜೊತೆ ಎರಡನೇ ಬ್ರೇಕ್ ಫಾಸ್ಟ್ ಮೀಟಿಂಗ್ ಬಳಿಕ ಸಿಎಂ ಸಿದ್ದರಾಮಯ್ಯ ತಮ್ಮ ಅಂತಿಮ ನಿರ್ಧಾರವೇನು ಎಂಬುದನ್ನು ಘೋಷಣೆ ಮಾಡಿದ್ದಾರೆ.
ನಿನ್ನೆ ಡಿಕೆಶಿ ನಿವಾಸದಲ್ಲಿ ಎರಡನೇ ಬ್ರೇಕ್ ಫಾಸ್ಟ್ ಮೀಟಿಂಗ್ ಮುಗಿಸಿದ ಬಳಿಕ ಸಿಎಂ ಸಿದ್ದರಾಮಯ್ಯ ಬಹಳ ಬ್ಯುಸಿಯಾಗಿದ್ದರು. ಸರ್ಕಾರಕ್ಕೆ ಸಂಬಂಧಿಸಿದ ಕಾರ್ಯಕ್ರಮವಲ್ಲದೆ ತಮ್ಮ ಕೆಲವು ಆಪ್ತರನ್ನೂ ಭೇಟಿ ಮಾಡಿದ್ದಾರೆ.
ಇನ್ನು, ಮಾಧ್ಯಮಗಳಂತೂ ಏನು ನಿರ್ಧಾರ ಮಾಡಿದ್ದೀರಿ ಎಂದು ಸಿದ್ದರಾಮಯ್ಯ ಬೆನ್ನು ಬಿದ್ದಿದ್ದರು. ಡಿಕೆ ಶಿವಕುಮಾರ್ ಯಾವಾಗ ಸಿಎಂ ಆಗ್ತಾರೆ ಎಂದು ಪ್ರಶ್ನೆ ಮಾಡಿದ್ದಾರೆ. ಇದಕ್ಕೆ ಉತ್ತರಿಸಿರುವ ಸಿದ್ದರಾಮಯ್ಯ ಹೈಕಾಂಡ್ ಹೇಳಿದಾಗ ಡಿಕೆ ಶಿವಕುಮಾರ್ ಮುಖ್ಯಮಂತ್ರಿ ಎಂದಿದ್ದಾರೆ. ಹೈಕಮಾಂಡ್ ಹೇಳಿದರೆ ಸಿಎಂ ಸ್ಥಾನ ಬಿಟ್ಟುಕೊಡಲು ರೆಡಿ ಎಂದಿದ್ದಾರೆ.
ಇನ್ನು, ಆಪ್ತ ಶಾಸಕ ಬೇಳೂರು ಗೋಪಾಲಕೃಷ್ಣ ಭೇಟಿ ವೇಳೆ ರಾಜಕೀಯದಲ್ಲಿ ಯಾವುದೂ ಶಾಶ್ವತ ಅಲ್ಲ. ನಾನು ಯಾವುದಕ್ಕೂ ತಲೆ ಕೆಡಿಸಿಕೊಳ್ಳಲ್ಲ. ಆಗಿದ್ದು ಆಗಲಿ ಎಂದಿದ್ದಾರೆ. ಈ ಮೂಲಕ ಯಾವುದೇ ಪರಿಸ್ಥಿತಿ ಬಂದರೂ ಎದುರಿಸಲು ರೆಡಿಯಾಗಿರುವುದಾಗಿ ಘೋಷಿಸಿದ್ದಾರೆ.