Select Your Language

Notifications

webdunia
webdunia
webdunia
webdunia

ರಾಜ್ಯದ ಎಲ್ಲ ಸಮಸ್ಯೆಗೆ ನಾಟಿಕೋಳಿಯಲ್ಲಿ ಪರಿಹಾರವಿದೆಯೇ: ಎನ್.ರವಿಕುಮಾರ್ ಪ್ರಶ್ನೆ

Legislative Council Opposition Chief Whip N. Ravikumar

Sampriya

ಬೆಂಗಳೂರು , ಮಂಗಳವಾರ, 2 ಡಿಸೆಂಬರ್ 2025 (20:26 IST)
Photo Credit X
ಬೆಂಗಳೂರು: ನಾಟಿಕೋಳಿ ಮಾಡುತ್ತೀರಾ? ಕುರಿ ಕೊಯಿಸುತ್ತೀರಾ? ಅಥವಾ ಇಡ್ಲಿ ವಡಾ, ಸಾಂಬಾರ್ ಅಥವಾ ಉಪ್ಪಿಟ್ಟಿನ ಸಿಂಪಲ್ ಉಪಹಾರಕ್ಕೆ ಮುಗಿಸುತ್ತೀರಾ? ಕರ್ನಾಟಕದ ಸಮಸ್ಯೆ ಉಪಹಾರದಲ್ಲಿ ಮುಗಿಯುತ್ತದೆ ಎಂದು ಕಾಂಗ್ರೆಸ್ ಹೈಕಮಾಂಡ್ ಭಾವಿಸಿದೆ ಎಂದು ವಿಧಾನಪರಿಷತ್ ವಿಪಕ್ಷದ ಮುಖ್ಯ ಸಚೇತಕ ಎನ್.ರವಿಕುಮಾರ್ ಅವರು ಟೀಕಿಸಿದ್ದಾರೆ.

ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ”ದಲ್ಲಿ ಇಂದು ಮಾಧ್ಯಮ ಗೋಷ್ಠಿಯಲ್ಲಿ ಮಾತನಾಡಿದ ಅವರು, ಟಿ.ವಿ., ಪತ್ರಿಕೆಗಳಲ್ಲಿ ನಿನ್ನೆಯಿಂದ ನಾಟಿಕೋಳಿ ಬಗ್ಗೆ ಚರ್ಚೆ ನಡೆಯುತ್ತಿದೆ. ಕರ್ನಾಟಕದಲ್ಲಿ ಎಲ್ಲ ಸಮಸ್ಯೆ ಪರಿಹಾರ ಆಗುವುದಾದರೆ ಎಲ್ಲರಿಗೂ ನಾಟಿಕೋಳಿ ಕೊಟ್ಟು ಬಿಡಬಹುದು ಎಂದು ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಅವರಿಗೆ ವ್ಯಂಗ್ಯವಾಗಿ ತಿಳಿಸಿದರು. ನಾಟಿಕೋಳಿಯಲ್ಲಿ ಪರಿಹಾರ ಇದೆ; ಉಪಹಾರಕ್ಕೆ ಕರೆಯಿರಿ ಎಂದು ಹೈಕಮಾಂಡ್ ಸೂಚನೆ ಕೊಟ್ಟಿದೆಯಂತೆ ಎಂದು ಹೇಳಿದರು.

ರಾಜ್ಯದಲ್ಲಿ ರೈತರ ಸಮಸ್ಯೆ, ರಸ್ತೆ ಹೊಂಡದ ಸಮಸ್ಯೆ ಸೇರಿ ಅನೇಕ ಸಮಸ್ಯೆಗಳಿವೆ. ರೈತರ ಹೋರಾಟ, ಶಿಕ್ಷಕರ- ಅತಿಥಿ ಉಪನ್ಯಾಸಕರ ಹೋರಾಟ ನಡೆಯುತ್ತಿದೆ. ಸರಣಿ ದರೋಡೆಗಳು ನಡೆಯುತ್ತಿವೆ. ಕಾನೂನು- ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟು ಹೋಗಿದೆ ಎಂದು ಆಕ್ಷೇಪಿಸಿದರು. ಇವುಗಳ ಚರ್ಚೆ ನಡೆಯುತ್ತಿಲ್ಲ ಎಂದು ತಿಳಿಸಿದರು.

ರೈತರ ಸಮಸ್ಯೆಗಳನ್ನು ಉಪಹಾರದಲ್ಲಿ ಮುಗಿಸಿದ್ದೀರಾ? ಬೆಂಗಳೂರಿನ ರಸ್ತೆ ಸಮಸ್ಯೆ ಉಪಹಾರದಲ್ಲಿ ಮುಗಿಸಿದ್ದೀರಾ? ಕೇಂದ್ರ ಸರಕಾರ ರೈತರ ಬೆಳೆಗಳಿಗೆ ಬೆಂಬಲ ಬೆಲೆ ಪ್ರಕಟಿಸಿ ಅನೇಕ ತಿಂಗಳಾಗಿದೆ. ಒಂದು ಕ್ವಿಂಟಲ್ ಮೆಕ್ಕೆಜೋಳಕ್ಕೆ 2,400 ರೂ. ಘೋಷಿಸಿದ್ದರೂ ಖರೀದಿ ಕೇಂದ್ರಗಳನ್ನು ಈ ಸರಕಾರ ತೆರೆದಿಲ್ಲ ಎಂದು ಟೀಕಿಸಿದರು. ರೈತರು ಮೆಕ್ಕೆಜೋಳವನ್ನು 1,600 ರೂ. 1,700 ರೂಪಾಯಿಗೆ ಮಾರಾಟ ಮಾಡುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು. ಈ ಸರಕಾರವು 5 ಲಕ್ಷ ಕ್ವಿಂಟಲ್ ಖರೀದಿಗೆ ಆದೇಶ ಹೊರಡಿಸಿದೆ; ಲಕ್ಷಾಂತರ ಕ್ವಿಂಟಲ್ ಮೆಕ್ಕೆಜೋಳ ಬೆಳೆ ಬಂದಿದ್ದು, ರೈತರು ಅಸಮಾಧಾನದಿಂದ ಈ  ಆದೇಶವನ್ನು ಹರಿದುಹಾಕಿದ್ದಾರೆ ಎಂದರು.

ರಾಜ್ಯಾದ್ಯಂತ ವ್ಯಾಪಕವಾಗಿ ಖರೀದಿ ಕೇಂದ್ರಗಳನ್ನು ತೆರೆಯಬೇಕು ಎಂದು ಅವರು ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿಗಳಿಗೆ ಮನವಿ ಮಾಡಿದರು. ಹೆಸರು- ಒಂದು ಕ್ವಿಂಟಲ್‍ಗೆ 8 ಸಾವಿರ ರೂ. ಪ್ರಕಟಿಸಿದ್ದರೂ ಖರೀದಿ ಕೇಂದ್ರವನ್ನು ಈ ಸರಕಾರ ತೆರೆದಿಲ್ಲ; ಉದ್ದು- ಸುಮಾರು 7,400 ರೂ. ಘೋಷಿಸಿದ್ದರೂ ಖರೀದಿ ಕೇಂದ್ರವನ್ನು ತೆರೆಯುತ್ತಿಲ್ಲ ಎಂದು ಆಕ್ಷೇಪಿಸಿದರು. ಬಿಜೆಪಿ ರೈತರ ಪರವಾಗಿ ಹೋರಾಟಗಳನ್ನು ಹಮ್ಮಿಕೊಳ್ಳುತ್ತಿದೆ ಎಂದು ಗಮನ ಸೆಳೆದರು.

2 ಸಾವಿರಕ್ಕೂ ಹೆಚ್ಚು ರೈತರ ಆತ್ಮಹತ್ಯೆ
2 ಸಾವಿರಕ್ಕೂ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ರೈತರು ಸಂಕಷ್ಟದ ಸಂಕೋಲೆಯಲ್ಲಿ ಸಿಲುಕಿದ್ದಾರೆ ಎಂದು ಹೇಳಿದರು. ಹತ್ತಿ ಸಾಕಷ್ಟು ಹಾಳಾಗಿದೆ. ಕೆಲವು ಕಡೆ ಹತ್ತಿ ಲಭ್ಯವಿದ್ದರೂ ಸರಕಾರ ಖರೀದಿ ಕೇಂದ್ರ ತೆರೆದಿಲ್ಲ. ರಾಯಚೂರು, ಬಳ್ಳಾರಿ, ಗದಗ, ಹುಬ್ಬಳ್ಳಿ, ಧಾರವಾಡ, ದಾವಣಗೆರೆ, ಚಿತ್ರದುರ್ಗದ ಕೆಲವು ಪ್ರದೇಶಗಳಲ್ಲಿ ಹತ್ತಿ ಇದ್ದರೂ ಸರಕಾರ ಖರೀದಿ ಕೇಂದ್ರಗಳನ್ನು ತೆರೆದಿಲ್ಲ ಎಂದು ಟೀಕಿಸಿದರು. ಹತ್ತಿ ಖರೀದಿ ಕೇಂದ್ರಗಳನ್ನು ತೆರೆಯಬೇಕಿದೆ ಎಂದು ಒತ್ತಾಯಿಸಿದರು.

ತೊಗರಿ ಬೆಳೆ ಪರಿಹಾರ ಕೊಡದ ಸರಕಾರ...
ಕಳೆದ ಸಾರಿ ಈ ಸರಕಾರವು ತೊಗರಿ ನಾಡು ಕಲ್ಯಾಣ ಕರ್ನಾಟಕ ಭಾಗದಲ್ಲಿ ತೊಗರಿ ಬೆಳೆ ನಷ್ಟಕ್ಕೆ 500 ಕೋಟಿ ಪರಿಹಾರ ಕೊಡುವುದಾಗಿ ಪ್ರಕಟಿಸಿತ್ತು. ಇದುವರೆಗೆ ಒಂದು ಪೈಸೆ ಕೊಟ್ಟಿಲ್ಲ ಎಂದು ದೂರಿದರು.
ರಾಜ್ಯ ವಕ್ತಾರ ಎಂ.ಜಿ.ಮಹೇಶ್, ಮಾಜಿ ಶಾಸಕÀ ಎಂ.ಡಿ.ಲಕ್ಷ್ಮೀನಾರಾಯಣ್ ಅವರು ಹಾಜರಿದ್ದರು

Share this Story:

Follow Webdunia kannada

ಮುಂದಿನ ಸುದ್ದಿ

ಶ್ರೀಲಂಕಾಗೆ ಸಹಾಯ ಮಾಡಲು ಹೋಗಿ ಮುಜುಗರಕ್ಕೀಡಾದ ಪಾಕಿಸ್ತಾನ, ಆಗಿದ್ದೇನು ಗೊತ್ತಾ