Select Your Language

Notifications

webdunia
webdunia
webdunia
webdunia

ದ್ವೇಷ ಭಾಷಣ ಮಸೂದೆಯು ಬಿಜೆಪಿಯ ಟಾರ್ಗೆಟ್‌ಗೆ ಅಲ್ಲ: ಗೃಹ ಸಚಿವ ಪರಮೇಶ್ವರ್‌ ಹೇಳಿದ್ದೇನು

Hate Speech Bill Presentation, Home Minister G. Parameshwar, Karnataka BJP

Sampriya

ಬೆಂಗಳೂರು , ಗುರುವಾರ, 4 ಡಿಸೆಂಬರ್ 2025 (14:32 IST)
ಬೆಂಗಳೂರು: ಸಚಿವ ಸಂಪುಟ ಸಭೆಯಲ್ಲಿ ಇಂದೇ  ಚರ್ಚಿಸಿ ದ್ವೇಷ ಭಾಷಣ ಮಸೂದೆ ಮಂಡನೆಗೆ  ಒಪ್ಪಿಗೆ ಪಡೆಯುತ್ತೇವೆ. ಈ ಮಸೂದೆಯನ್ನ ಬಿಜೆಪಿ ಟಾರ್ಗೆಟ್ ಮಾಡಲು ತರುತ್ತಿಲ್ಲ ಎಂದು ಗೃಹ ಸಚಿವ ಜಿ. ಪರಮೇಶ್ವರ್‌ ಹೇಳಿದ್ದಾರೆ.

ದ್ವೇಷ ಭಾಷಣ ಮಸೂದೆಯನ್ನ ಬಿಜೆಪಿಯ ಟಾರ್ಗೆಟ್‌ಗಾಗಿ ಎಂಬುದು ಸುಳ್ಳು ಆರೋಪ. ಅಧಿಕಾರದಲ್ಲಿ ನಾವೇ ಶಾಶ್ವತವಾಗಿ ಇರ್ತೀವಾ? ಅವರು ಬರಲ್ವಾ? ಯಾರೇ ಬಂದರೂ ಕಾಯ್ದೆ ಅದೇ ಇರುತ್ತೆ ಎಂದು ತಿಳಿಸಿದರು.

ದ್ವೇಷ ಭಾಷಣ ಸಂಬಂಧ ಮಸೂದೆ ಮಂಡನೆಗೆ ಇಂದು ಸಂಪುಟದಲ್ಲಿ ಚರ್ಚಿಸಿ ಅನುಮತಿ ಪಡೆಯುತ್ತೇವೆ. ಈಗ ಇರುವ ಕಾಯ್ದೆಯನ್ನೇ ಇನ್ನಷ್ಟು ಬಲಪಡಿಸುವ ತಿದ್ದುಪಡಿ ಮಾಡಲಾಗಿದೆ ಎಂದು ಶಾಸಕಾಂಗ ಪಕ್ಷದ ಸಭೆಗೆ ತೆರಳುವ ಮುನ್ನ ಮಾಧ್ಯಮಗಳೊಂದಿಗೆ ತಿಳಿಸಿದರು.

ಮಂಗಳೂರಿನಲ್ಲಿ ಸಿಎಂ-ಡಿಸಿಎಂ ಪರ ಘೋಷಣೆ ಕೂಗಿದ ವಿಚಾರಕ್ಕೆ ಉತ್ತರಿಸಿ, ಒಬ್ಬೊಬ್ಬ ನಾಯಕರಿಗೆ ಒಂದಷ್ಟು ಅಭಿಮಾನಿಗಳು ಇರ್ತಾರೆ. ಅವರು ಜೈಕಾರ ಹಾಕುತ್ತಿರುತ್ತಾರೆ, ಅದು ತಪ್ಪು ಅಂತ ಹೇಳಕ್ಕಾಗಲ್ಲ ಎಂದರು.

Share this Story:

Follow Webdunia kannada

ಮುಂದಿನ ಸುದ್ದಿ

ಕರ್ನಾಟಕದಲ್ಲಿ ಶೇ 63 ರಷ್ಟು ಭ್ರಷ್ಟಾಚಾರವಾಗುತ್ತಿದೆ ಎಂದ ನ್ಯಾ ವೀರಪ್ಪ: ಏನು ಹೇಳ್ತೀರಿ ಎಂದ ಅಶೋಕ್