ತುಮಕೂರು: ನಾಯಕತ್ವ ಬದಲಾವಣೆ ಜೋರಾಗಿಸುವ ಬೆನ್ನಲ್ಲೇ ಈ ಸಂಬಂಧ ಪ್ರತಿಕ್ರಿಯಿಸಿದ ಪಾವಗಡ ಶಾಸಕ ಎಚ್‌ವಿ ವೆಂಕಟೇಶ್ ಅವರು ಪವರ್ ಶೇರಿಂಗ್ ಆಗೋದಾದರೆ ದಲಿತ ಸಿಎಂಗೆ ಅವಕಾಶ ಕೊಟ್ಟರೆ ಖುಷಿಯ ವಿಚಾರ ಎಂದಿದ್ದಾರೆ.
ದಲಿತ ಸಿಎಂ ಕೂಗು ಕುರಿತು ತುಮಕೂರಿನಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಸಿಎಂ ಸ್ಥಾನದಲ್ಲಿ ಸಿದ್ದರಾಮಯ್ಯನವರು, ಅದಲ್ಲದೆ ಸಿಎಂ ಸ್ಥಾನ ಡಿಕೆ ಶಿವಕುಮಾರ್ ಅವರಿಗೆ ಕೊಟ್ಟರೂ, ಅಥವಾ ದಲಿತರನ್ನು ಸಿಎಂ ಆಗಿ ಮಾಡಿದರೂ ನಮಗೆ ಖುಷಿಯಿದೆ ಎಂದು ಅವರು ಹೇಳಿದರು.
2013ರಲ್ಲಿ ನಾಣು ಚುನಾವಣೆಯಲ್ಲಿ ಸೋತ ಸಮಯದಲ್ಲಿ ಸಚಿವ ಪರಮೇಶ್ವರ್ ಅವರು ಕೂಡಾ ಸೋತಿದ್ದರು. ಒಂದು ವೇಳೆ ಆ ಸಮಯದಲ್ಲಿ ಅವರು ಗೆಲುವು ಸಾಧಿಸುತ್ತಿದ್ದರೆ ಪರಮೇಶ್ವರ್ ಅವರೇ ಮುಖ್ಯಮಂತ್ರಿಯಾಗುತ್ತಿದ್ದರು.
ಇದೀಗ ಪರಮೇಶ್ವರ್ ಸಾಹೇಬರು ಸಿಎಂ ಆಗಬೇಕೆಂಬುದು ನನ್ನ ಆಸೆ. ಹೈಕಮಾಂಡ್ ಏನೇ ನಿರ್ಧಾರ ಕೈಗೊಂಡರು ಅದಕ್ಕೆ ನಾನು ಬದ್ಧನಾಗಿರುತ್ತೇನೆಂದು ಹೇಳಿದರು.