ಬೆಂಗಳೂರು: ರಾಜ್ಯದಲ್ಲಿ ಈಗ ಸಿಎಂ ಬದಲಾವಣೆ ವಿಚಾರ ಭಾರೀ ಸದ್ದು ಮಾಡುತ್ತಿದೆ. ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ನಡುವೆ ಕುರ್ಚಿ ಫೈಟ್ ಗೆ ಈಗ ಹೊಸದಾಗಿ ಮತ್ತೊಬ್ಬರು ಎಂಟ್ರಿ ಕೊಟ್ಟಿದ್ದಾರೆ. ಅವರು ಯಾರು ಗೊತ್ತಾ?
ರಾಜ್ಯದಲ್ಲಿ ಡಿಕೆ ಶಿವಕುಮಾರ್ ಹೊರತಾಗಿ ಸಿಎಂ ಆಕಾಂಕ್ಷಿಗಳು ಇನ್ನಷ್ಟು ಮಂದಿ ಇದ್ದಾರೆ. ಮಾಧ್ಯಮಗಳ ಮುಂದೆ ಈಗಾಗಲೇ ಸತೀಶ್ ಜಾರಕಿಹೊಳಿ, ಎಂಬಿ ಪಾಟೀಲ್ ಸೇರಿದಂತೆ ಅನೇಕ ನಾಯಕರು ನನಗೂ ಸಿಎಂ ಆಗಬೇಕೆಂಬ ಆಸೆಯಿದೆ ಎಂದು ಹೇಳಿಕೊಂಡಿದ್ದು ಇದೆ.
ಇದೀಗ ಸಿದ್ದು-ಡಿಕೆಶಿ ಕುರ್ಚಿ ಫೈಟ್ ನಡುವೆ ಗೃಹಸಚಿವ ಡಾ ಜಿ ಪರಮೇಶ್ವರ್ ಹೊಸ ಎಂಟ್ರಿಯಾಗಿದ್ದಾರೆ. ಪರಮೇಶ್ವರ್ ಈ ಮೊದಲಿನಿಂದಲೂ ಸಿಎಂ ಆಗುವ ಕನಸು ಇಟ್ಟುಕೊಂಡಿದ್ದವರು. ಇದೀಗ ಸಿದ್ದು-ಡಿಕೆಶಿ ಜಗಳದ ಬಗ್ಗೆ ಕೇಳಿದಾಗ ನಾನೂ ಸಿಎಂ ರೇಸ್ ನಲ್ಲಿದ್ದೇನೆ ಎಂದು ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ.
ಹೈಕಮಾಂಡ್ ಈಗಾಗಲೇ ಸಿದ್ದರಾಮಯ್ಯ-ಡಿಕೆಶಿ ನಡುವಿನ ಫೈಟ್ ಸರಿ ಮಾಡೋದು ಹೇಗೆ ಎಂದು ತಲೆಕೆಡಿಸಿಕೊಂಡು ಕೂತಿದೆ. ಅದರ ನಡುವೆ ಡಾ ಜಿ ಪರಮೇಶ್ವರ್ ಹೊಸದಾಗಿ ಎಂಟ್ರಿ ಕೊಟ್ಟಿದ್ದಾರೆ.