ಬೆಂಗಳೂರು: ರಾಜ್ಯ ಕಾಂಗ್ರೆಸ್ ನಲ್ಲಿ ನಾಯಕತ್ವ ಬದಲಾವಣೆ ವಿಚಾರ ಸದ್ದು ಮಾಡುತ್ತಿರುವಾಗಲೇ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಟ್ರೋಲ್ ಗಳಾಗುತ್ತಿವೆ.
ಡಿಕೆ ಶಿವಕುಮಾರ್ ತಮ್ಮ ಬಣದ ಶಾಸಕರ ಮೂಲಕ ಹೈಕಮಾಂಡ್ ಮೇಲೆ ಒತ್ತಡ ಹೇರುವ ತಂತ್ರ ಮಾಡುತ್ತಿದ್ದಾರೆ. ಆದರೂ ಹೈಕಮಾಂಡ್ ಯಾಕೋ ಅಷ್ಟು ಸುಲಭವಾಗಿ ಸಿದ್ದರಾಮಯ್ಯನವರನ್ನು ಕೆಳಗಿಳಿಸುವ ಯೋಚನೆ ಮಾಡುತ್ತಿಲ್ಲ. ಹೀಗಾಗಿ ಡಿಕೆಶಿ ನಾನಾ ರೀತಿಯ ರಣ ತಂತ್ರ ಹೆಣೆಯುತ್ತಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.
ಈ ನಡುವೆ ಸೋಷಿಯಲ್ ಮೀಡಿಯಾದಲ್ಲಿ ಕೆಲವರು ಡಿಕೆ ಸಾಹೇಬ್ರು ಇಷ್ಟೆಲ್ಲಾ ಕಷ್ಟಪಡುವ ಬದಲು ಸೋಷಿಯಲ್ ಮೀಡಿಯಾ ಪೇಜ್ ನಲ್ಲಿ ಅಮಿತ್ ಶಾ ಜೊತೆಗಿರುವ ತಮ್ಮದೊಂದು ಫೋಟೋ ಹಾಕಿಕೊಂಡ್ರೂ ಸಾಕಿತ್ತಪ್ಪಾ. ತಕ್ಷಣವೇ ಕೆಲಸ ಆಗಿಬಿಡೋದು ಎಂದು ಕಿಚಾಯಿಸುತ್ತಿದ್ದಾರೆ.
ಅಂದರೆ ಡಿಕೆ ಶಿವಕುಮಾರ್ ಅವರನ್ನು ಅಮಿತ್ ಶಾ ಭೇಟಿಯಾಗಿದ್ದಾರೆಂದು ತಿಳಿದರೆ ತಕ್ಷಣವೇ ಕಾಂಗ್ರೆಸ್ ಹೈಕಮಾಂಡ್ ಎಚ್ಚೆತ್ತುಕೊಳ್ಳುತ್ತದೆ. ಎಲ್ಲಿ ಸರ್ಕಾರ ಬಿದ್ದು ಹೋಗುತ್ತದೆ ಎಂಬ ಭಯಕ್ಕೆ ಡಿಕೆಶಿ ಕೇಳಿದ ಸ್ಥಾನ ಕೊಟ್ಟುಬಿಡುತ್ತದೆ ಎಂದು ಕೆಲವರು ಸೋಷಿಯಲ್ ಮೀಡಿಯಾದಲ್ಲಿ ತಮಾಷೆ ಮಾಡುತ್ತಿದ್ದಾರೆ.