ಬೆಂಗಳೂರು: ಪ್ರಸ್ತುತ ದಿನಗಟ್ಟದಲ್ಲಿ ಗಂಡು ತನಗಿಂತ ದೊಡ್ಡ ವಯಸ್ಸಿನ ಹುಡುಗಿಯನ್ನು ಮದುವೆಯಾಗುವುದು ಸರ್ವೇ ಸಾಮಾನ್ಯವಾಗಿದೆ. ಆದರೆ ವೈದ್ಯಕೀಯ ಪ್ರಕಾರ ಗಂಡು ಹೆಣ್ಣಿನ ವಯಸ್ಸಿನ ಅಂತರ ಎಷ್ಟಿರಬೇಕು ಹಾಗೂ ಹೆಣ್ಣು, ಗಂಡಿಗಿಂತ ದೊಡ್ಡವರಾಗಿದ್ದರೆ ಎದುರಾಗುವ ಸಮಸ್ಯೆಗಳ ಬಗ್ಗೆ ಸ್ತ್ರೀರೋಗ ತಜ್ಞೆ ಡಾ.ಪದ್ಮಿನಿ ಪ್ರಸಾದ್ ಅವರು ಹೇಳಿದ್ದಾರೆ.
ವೈಜ್ಞಾನಿಕವಾಗಿ ಹೆಣ್ಣು ಗಂಡಿಗಿಂತ ಬೇಗನೇ ಪ್ರಬುದ್ಧಳಾಗುತ್ತಾಳೆ. ಹೆಣ್ಣು 11ರಿಂದ 12 ವರ್ಷಕ್ಕೆ ಪ್ರಬುದ್ಧಳಾದಳೆ, ಗಂಡು 14 ರಿಂದ 16ರಲ್ಲಿ ಪ್ರಬುದ್ಧನಾಗುತ್ತಾನೆ. ಹಾಗಾಗಿ ಮದುವೆಯಾಗುವ ಹೆಣ್ಣು ದೊಡ್ಡವಳಾಗಿದ್ರೆ, ಗಂಡು ವಯಸ್ಸಿನಲ್ಲಿ ಚಿಕ್ಕವನಾಗಿದ್ರೆ, ದೇಹದ ಬೆಳವಣಿಗೆಯಲ್ಲಿ ಏರುಪೇರಾಗಿರುತ್ತದೆ ಎಂಬುದು ಒಂದು ಕಾರಣ. ಇನ್ನೂ ಒಂದೇ ವಯಸ್ಸಿನವರನ್ನು ಪ್ರೀತಿಸಿ ಮದುವೆಯಾದಾಗ ವಯಸ್ಸಿನ ಅಂತರದ ಸಮಸ್ಯೆಗಳು ಕಾಡಾದೆ ಇರಬಹುದು.
ಇನ್ನೂ ವೈಜ್ಞಾನಿಕ ಮತ್ತೊಂದು ಕಾರಣ ಏನೆಂದರೆ ಹೆಣ್ಣಿಗೆ ಸಂತಾನೋತ್ಪತಿ ಪ್ರಕ್ರಿಯೆ 50 ವರ್ಷದೊಳಗೆ ಮುಗಿದು ಹೋಗುತ್ತದೆ. ಆದರೆ ಗಂಡಿಗೆ 70 ವರ್ಷದವರೆಗೆ ತಂದೆಯಾಗುವ ಸಾಧ್ಯತೆಯಿರುತ್ತದೆ. ಹಾಗಾಗಿ ಹೆಣ್ಣು ದೊಡ್ಡವಳಾಗಿದ್ದಳೆ ಬೇಗನೇ ಸಂತಾನೋತ್ಪತಿ ಮುಗಿದರೆ ಈ ಸಂದರ್ಭದಲ್ಲಿ ಮಕ್ಕಳು ಪಡೆಯಲು ಸಮಸ್ಯೆಯಾಗುವ ಸಾಧ್ಯತೆಯಿದೆ.