ಚಳಿಗಾಲದಲ್ಲಿ ಮೊಸರು, ಮಜ್ಜಿಗೆ ಸೇವನೆಯಿಂದ ಶೀತವಾಗುತ್ತದೆ ಎಂದು ಕೆಲವರು ಹೇಳುತ್ತಾರೆ. ಆಯುರ್ವೇದ ಪ್ರಕಾರ ಚಳಿಗಾಲದಲ್ಲಿ ಮೊಸರು ಸೇವಿಸಬಹುದೇ?
ಮೊಸರಿನಲ್ಲಿ ಪ್ರೊ ಬಯೋಟಿಕ್ ಗಳು ಜೀರ್ಣಕ್ರಿಯೆಗೆ ಉತ್ತಮ. ಚಳಿಗಾಲದಲ್ಲಿ ಮೊಸರು ತಿನ್ನಬಾರದು ಎಂದೇನಿಲ್ಲ. ಕೆಲವರಿಗೆ ಮೊಸರು ತಿಂದರೆ ಶೀತವಾಗುತ್ತದೆ ಎಂದು ಹೇಳುವುದಿದೆ. ಆದರೆ ಅದಕ್ಕೆ ಬೇರೆ ಕಾರಣವೂ ಇದೆ.
ಮೊಸರನ್ನು ಯಾವತ್ತೂ ಫ್ರಿಡ್ಜ್ ನಲ್ಲಿಟ್ಟು ಸೇವಿಸಬೇಕು. ಮೊಸರನ್ನು ಕೊಠಡಿ ಉಷ್ಣತೆಯಲ್ಲಿರಿಸಿ ಸೇವನೆ ಮಾಡುವುದು ಉತ್ತಮ. ಹಾಗಿದ್ದರೂ ರಾತ್ರಿ ಮೊಸರು ಸೇವನೆ ಮಾಡಬೇಡಿ. ಮುಟ್ಟಿನ ಸಮಯದಲ್ಲಿ ಹೊಟ್ಟೆ ನೋವು ಬರುವ ಸಮಸ್ಯೆಯಿದ್ದ ಮೊಸರು ಸೇವನೆ ಮಾಡದೇ ಇರುವುದು ಉತ್ತಮ.
ಮೊಸರು ದೇಹದಲ್ಲಿ ಆಂತರಿಕ ಉಷ್ಣತೆಯನ್ನು ಉಂಟು ಮಾಡುತ್ತದೆ ಎನ್ನಲಾಗುತ್ತದೆ. ಹೀಗಾಗಿ ಚಳಿಗಾಲದಲ್ಲಿ ದೇಹ ಬೆಚ್ಚಗಿಡಲು ಮೊಸರು ಸಹಾಯಕ. ಇದರಲ್ಲಿ ರೋಗ ನಿರೋಧಕ ಶಕ್ತಿಯೂ ಹೆಚ್ಚಿರುವುದರಿಂದ ಚಳಿಗಾಲದಲ್ಲೂ ಸೇವನೆ ಮಾಡುವುದಕ್ಕೆ ಸಮಸ್ಯೆಯಿಲ್ಲ.