ಬೆಂಗಳೂರು: ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಏಕವಚನ ಬಳಕೆ ಮಾಡಿ ಮಾತನಾಡಿರುವ ವಿಚಾರವಾಗಿ ಸಿಎಂ ಸಿದ್ದರಾಮಯ್ಯ ಅವರನ್ನು ಬಿಜೆಪಿ ನಾಯಕ ಆರ್ ಅಶೋಕ್ ತರಾಟೆಗೆ ತೆಗೆದುಕೊಂಡಿದ್ದಾರೆ.
ಸಿದ್ದರಾಮಯ್ಯ ನಡೆ ಬಗ್ಗೆ ಪ್ರಶ್ನಿಸಿ ಆರ್ ಅಶೋಕ್ ಎಕ್ಸ್‌ನಲ್ಲಿ ಪೋಸ್ಟ್ ಹಂಚಿಕೊಂಡು ಪ್ರಶ್ನೆ ಮಾಡಿದ್ದಾರೆ.
ನಮ್ಮ ದೇಶದ ಗೌರವಾನ್ವಿತ ಹಣಕಾಸು ಸಚಿವೆ ಅವರನ್ನು ಹೀಗೆ ಏಕವಚನದಲ್ಲಿ, ಅಗೌರವದಿಂದ ಸಂಬೋಧನೆ ಮಾಡುವುದು ಯಾವ ಸಂಸ್ಕೃತಿ ಸ್ವಾಮಿ? ಇದು ಮನುವಾದನಾ? ಅಥವಾ ಸಿದ್ದರಾಮಯ್ಯವಾದನಾ? ಅಥವಾ ರಾಹುಲ್ ಗಾಂಧಿವಾದನಾ?
ಇದನ್ನ ಪ್ರಶ್ನೆ ಮಾಡಿದರೆ, ತಮ್ಮದು ಗ್ರಾಮೀಣ ಭಾಷೆ, ತಾವು ಹಳ್ಳಿಯಿಂದ ಬಂದವರು ಎಂಬ ಬುರುಡೆ ಸಮಜಾಯಿಷಿ ಕೊಡಬೇಡಿ.
ಇಂದಿರಾ ಗಾಂಧಿ ಅವರನ್ನ ಅಥವಾ ಸೋನಿಯಾ ಗಾಂಧಿ ಅವರನ್ನ ಅಥವಾ ಪ್ರಿಯಾಂಕಾ ಗಾಂಧಿ ಅವರನ್ನ ಇದೇ ಭಾಷೆಯಲ್ಲಿ, ಇದೇ ಧಾಟಿಯಲ್ಲಿ "ಎಂಥವಳೋ ಅವಳು?" ಎಂದು ಸಂಬೋಧನೆ ಮಾಡೋ ತಾಕತ್ತಿದೆಯಾ?
ಮಹಿಳೆಯರನ್ನ ತುಚ್ಛವಾಗಿ ಕಾಣುವ ಕಾಂಗ್ರೆಸ್ ಪಕ್ಷದ ಈ ಕೀಳು ಮನಸ್ಥಿತಿಯನ್ನ ಕರ್ನಾಟಕದ ಸ್ವಾಭಿಮಾನಿ ಮಹಿಳೆಯರು ಎಂದಿಗೂ ಕ್ಷಮಿಸುವುದಿಲ್ಲ.