ಸ್ವಾಭಿಮಾನದ ಆಟದಿಂದಲೇ ಬಿಗ್‌ಬಾಸ್ ಮನೆಯಲ್ಲಿ ಹೆಚ್ಚು ಗುರುತಿಸಿಕೊಂಡಿರುವ ನಟಿ ಮೋಕ್ಷಿತಾ ಪೈ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಹಳೆಯ ಪ್ರಕರಣವೊಂದು ಭಾರೀ ಸದ್ದು ಮಾಡುತ್ತಿದೆ. ಈ ಪ್ರಕರಣದ ಬಗ್ಗೆ ಮೋಕ್ಷಿತಾ ಪೈ ಆಪ್ತರು ಈವರೆಗೂ ಪ್ರತಿಕ್ರಿಯಿಸಿಲ್ಲ. ಆದರೆ ಸೋಶಿಯಲ್ ಮೀಡಿಯಾಗಳಲ್ಲಿ ಅವರ ಫೋಟೋ, ವಿಡಿಯೋ ಬಳಸಿ ಭಾರೀ ವೈರಲ್ ಮಾಡಲಾಗುತ್ತಿದೆ.
ಇದೀಗ ಈ ವಿಚಾರವಾಗಿ ಬಿಗ್‌ಬಾಸ್ ಸೀಸನ್ 11ರ ಸ್ಪರ್ಧಿಯಾಗಿರುವ ಜಗದೀಶ್ ಅವರು ವಿಡಿಯೋ ಮಾಡಿ ಪ್ರತಿಕ್ರಿಯಿಸಿದ್ದಾರೆ.
'ಈ ರೀತಿ ಮಕ್ಕಳನ್ನು ಕಿಡ್ನಾಪ್ ಮಾಡಿರುವಂತಹ ಆರೋಪ ಇರುವ ವ್ಯಕ್ತಿಯನ್ನು ಬಿಗ್ ಬಾಸ್ ತಂಡ ಯಾವ ಆಧಾರದ ಮೇಲೆ ಕರೆದುಕೊಂಡು ಬಂದು ಜನರ ಮುಂದೆ ನಿಲ್ಲಿಸುತ್ತಾರೆ ಎಂದರೆ ನಿಜಕ್ಕೂ ಆಶ್ಚರ್ಯವಾಗುತ್ತದೆ. ನಮ್ಮ ಮುಂದೆ ಇರುವ ದೊಡ್ಡ ಪ್ರಶ್ನೆ ಎಂದರೆ ಮೋಕ್ಷಿತಾ ಮುಖಾಂತರ ಬಿಗ್ ಬಾಸ್ ಕರ್ನಾಟಕಕ್ಕೆ ಏನು ಸಂದೇಶ ಕೊಡುತ್ತಾರೆ' ಎಂದು ಪ್ರಶ್ನೆ ಮಾಡಿದ್ದಾರೆ.
'ಮೋಕ್ಷಿತಾ ಮತ್ತು ಆಕೆಯ ಗೆಳೆಯ ಮಕ್ಕಳ ಕಿಡ್ನಾಪ್ ಆರೋಪ ಹೊತ್ತಿದ್ದಾರೆ. ನಿಜವಾಗಿಯೂ ಇದು ಅದೇ ಮೋಕ್ಷಿತಾನಾ..? ಅಲ್ಲಿ ಐಶ್ವರ್ಯ. ಆಕೆಯ ಹೆಸರು ಐಶ್ವರ್ಯ ಪೈ ಎನ್ನುವ ಮಾಹಿತಿ ಸಿಕ್ಕಿದೆ. ಮೊದಲು ಐಶ್ವರ್ಯ ಪೈ ಅಂತಾ ಇತ್ತು. ಈ ಕೇಸ್ ಆದ ಮೇಲೆ ಹೆಸರು ಹಾಳಾಗಿದೆ ಅಂತಾ ಹೆಸರನ್ನು ಮೋಕ್ಷಿತಾ ಪೈ ಎಂದು ಬದಲಾಯಿಸಿಕೊಂಡಿದ್ದಾರೆ' ಎಂದು ಹೇಳಿದ್ದಾರೆ.