Select Your Language

Notifications

webdunia
webdunia
webdunia
webdunia

Video: ಗೌತಮ್ ಗಂಭೀರ್ ಪಿಚ್ ಕ್ಯುರೇಟರ್ ನಡುವೆ ನಿಜಕ್ಕೂ ನಡೆದಿದ್ದೇನು ಇಲ್ಲಿದೆ ವಿವರ

Gautam Gambhir

Krishnaveni K

ಲಂಡನ್ , ಬುಧವಾರ, 30 ಜುಲೈ 2025 (09:40 IST)
Photo Credit: X

ಲಂಡನ್: ಟೀಂ ಇಂಡಿಯಾ ಮುಖ್ಯ ಕೋಚ್ ಗೌತಮ್ ಗಂಭೀರ್ ಮತ್ತು ಪಿಚ್ ಕ್ಯುರೇಟರ್ ನಡುವಿನ ಕಿತ್ತಾಟ ಈಗ ವೈರಲ್ ಆಗಿದೆ. ಅಷ್ಟಕ್ಕೂ ಅಲ್ಲಿ ನಡೆದಿದ್ದೇನು ಇಲ್ಲಿದೆ ಸಂಪೂರ್ಣ ವಿವರ.

ದಿ ಓವಲ್ ಮೈದಾನದಲ್ಲಿ ಐದನೇ ಟೆಸ್ಟ್ ಪಂದ್ಯಕ್ಕಾಗಿ ಟೀಂ ಇಂಡಿಯಾ ಈಗಾಗಲೇ ಸಿದ್ಧತೆ ಆರಂಭಿಸಿದೆ. ಮೈದಾನದಲ್ಲಿ ಟೀಂ ಇಂಡಿಯಾ ಆಟಗಾರರು ಅಭ್ಯಾಸ ನಡೆಸುತ್ತಿದ್ದಾಗ ಕೋಚ್ ಗೌತಮ್ ಗಂಭೀರ್ ಪಿಚ್ ಸಮೀಪ ಬಂದಾಗ ಕ್ಯುರೇಟರ್ ಲೀ ಫೋರ್ಟಿಸ್ ಆಕ್ಷೇಪವೆತ್ತಿದ್ದಾರೆ. ಪಿಚ್ ನಿಂದ 2.5 ಮೀಟರ್ ದೂರವಿರುವಂತೆ ಹೇಳಿದ್ದಾರೆ. ಇದು ಗಂಭೀರ್ ಗೆ ಸಿಟ್ಟು ತರಿಸಿದೆ.

ಕ್ಯುರೇಟರ್: ಮತ್ತೊಮ್ಮೆ ಪಿಚ್ ಬಳಿ ಬರುವ ಸಾಹಸ ಮಾಡಬೇಡಿ. ಹಾಗೆ ಮಾಡಿದ್ರೆ ನಾನು ಮ್ಯಾಚ್ ರೆಫರಿಗೆ ದೂರು ನೀಡಬೇಕಾಗುತ್ತದೆ.

ಗಂಭೀರ್: ಹೋಗಿ ಹೇಳು, ಯಾರಿಗೆ ಬೇಕಾದ್ರೂ ದೂರು ಕೊಡು

(ಇಬ್ಬರ ನಡುವೆ ಕಿತ್ತಾಟ ಮುಂದುವರಿಯುತ್ತದೆ. ಗಂಭೀರ್ ಕೂಡಾ ಕೆಲವು ಅಶ್ಲೀಲ ಪದ ಬಳಸಿ ಹೋಗಿ ರಿಪೋರ್ಟ್ ಮಾಡು ಎನ್ನುತ್ತಾರೆ)

ಗಂಭೀರ್: ನಾವು ಏನು ಮಾಡಬೇಕು ಎಂದು ನೀನು ಹೇಳಬೇಕಾಗಿಲ್ಲ.ಮೊದಲು ನೀನು ನಿಲ್ಲಿಸು.

ಕ್ಯುರೇಟರ್ ಇದಕ್ಕೆ ಹೇಳುವ ಉತ್ತರ ಕೇಳಿಸುವುದಿಲ್ಲ.

ಗಂಭೀರ್: ಓಕೆ. ನೀನು ನನಗೆ ಏನು ಮಾಡಬೇಕು ಎಂದು ಹೇಳಲು ಬರಬೇಡ. ನಮಗೆ ಹೇಳಲು ನಿನಗೆ ಯಾವ ಹಕ್ಕೂ ಇಲ್ಲ ಅರ್ಥ ಆಯ್ತಾ? ನೀನು ಕೇವಲ ಮೈದಾನ ಸಿಬ್ಬಂದಿಯಷ್ಟೇ. ನಿನ್ನ ಮಿತಿಯಲ್ಲಿ ನೀನಿರು. ನೀನು ಕೇವಲ ಮೈದಾನ ಸಿಬ್ಬಂದಿ ಅದಕ್ಕಿಂತ ಹೆಚ್ಚೇನೂ ಅಲ್ಲ. ಕೇವಲ ಮೈದಾನ ಸಿಬ್ಬಂದಿ.

ಇದೇ ರೀತಿ ಇಬ್ಬರ ನಡುವೆ ಮಾತಿನ ಚಕಮಕಿ ಮುಂದುವರಿಯುತ್ತದೆ. ಇವರಿಬ್ಬರ ಮಾತಿನ ಚಕಮಕಿಯ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.



Share this Story:

Follow Webdunia kannada

ಮುಂದಿನ ಸುದ್ದಿ

ಇಂಗ್ಲೆಂಡ್ ವಿರುದ್ಧ ಐದನೇ ಟೆಸ್ಟ್ ಪಂದ್ಯಕ್ಕೆ ಟೀಂ ಇಂಡಿಯಾ ವಿಕೆಟ್ ಕೀಪರ್ ಯಾರು