Select Your Language

Notifications

webdunia
webdunia
webdunia
webdunia

IND vs ENG: ಕೆಎಲ್ ರಾಹುಲ್ ಟೀಂ ಇಂಡಿಯಾಗೆ ನೀವೇ ಗತಿ

KL Rahul

Krishnaveni K

ಮ್ಯಾಂಚೆಸ್ಟರ್ , ಶನಿವಾರ, 26 ಜುಲೈ 2025 (20:36 IST)
ಮ್ಯಾಂಚೆಸ್ಟರ್: ಭಾರತ ಮತ್ತು ಇಂಗ್ಲೆಂಡ್ ನಡುವಿನ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಎರಡನೇ ಇನಿಂಗ್ಸ್ ನಲ್ಲಿ ಶೂನ್ಯಕ್ಕೇ ಎರಡು ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದ ಟೀಂ ಇಂಡಿಯಾ ಈಗ ಕೆಎಲ್ ರಾಹುಲ್ ನೀವೇ ಗತಿ ಎನ್ನುತ್ತಿದೆ.

ಈ ಟೂರ್ ನಲ್ಲಿ ಅತ್ಯಂತ ಸರಾಗವಾಗಿ ರನ್ ಗಳಿಸಿ ಟೀಂ ಇಂಡಿಯಾ ಬ್ಯಾಟಿಗನೆಂದರೆ ಕೆಎಲ್ ರಾಹುಲ್. ಪ್ರತೀ ಇನಿಂಗ್ಸ್ ನಲ್ಲೂ ಅವರು ಆಪತ್ಬಾಂಧವರಾಗಿದ್ದಾರೆ. ತಮ್ಮ ಪಾತ್ರವನ್ನು ಸಮರ್ಥವಾಗಿ ನಿಭಾಯಿಸಿ ನಂತರ ಬರುವ ಬ್ಯಾಟಿಗರ ಕೆಲಸ ಸುಲಭ ಮಾಡಿದ್ದಾರೆ.

ಇದೀಗ 0 ಕ್ಕೆ 2 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ಭಾರತಕ್ಕೆ ರಾಹುಲ್ ಮತ್ತೆ ಪಕ್ಕಾ ಟೆಸ್ಟ್ ಶೈಲಿಯ ಇನಿಂಗ್ಸ್ ಮೂಲಕ ಆಪತ್ ಬಾಂಧವರಾಗಿದ್ದಾರೆ. ಇಂದು ಚಹಾ ವಿರಾಮದ ವೇಳೆಗೆ ಟೀಂ ಇಂಡಿಯಾ 2 ವಿಕೆಟ್ ನಷ್ಟಕ್ಕೆ 86 ರನ್ ಗಳಿಸಿದೆ. ನಾಯಕ ಶುಭಮನ್ ಗಿಲ್ 52 ರನ್ ಗಳಿಸಿದರೆ ಕೆಎಲ್ ರಾಹುಲ್ 93 ಎಸೆತಗಳಿಂದ 30 ರನ್ ಗಳಿಸಿದ್ದಾರೆ.

ಕೆಎಲ್ ರಾಹುಲ್ ರ ಮತ್ತೊಂದು ಆಪತ್ ಬಾಂಧವನ ಆಟಕ್ಕೆ ಅಭಿಮಾನಿಗಳು ಉಘೇ ಎಂದಿದ್ದಾರೆ. ಇದೀಗ ಭಾರತ ಇಂದಿನ ದಿನದಂತ್ಯದವರೆಗೂ ವಿಕೆಟ್ ಕಳೆದುಕೊಳ್ಳದೇ ಆಡಿದಲ್ಲಿ ಈ ಟೆಸ್ಟ್ ಪಂದ್ಯ ಉಳಿಸಿಕೊಳ್ಳಲು ಪ್ರಯತ್ನ ನಡೆಸಬಹುದು. ಎಲ್ಲವೂ ಈಗ ಶುಭಮನ್ ಗಿಲ್ ಮತ್ತು ರಾಹುಲ್ ಕೈಯಲ್ಲಿದೆ. ಭಾರತ ಇನ್ನೂ 225 ರನ್ ಗಳ ಬೃಹತ್ ಹಿನ್ನಡೆಯಲ್ಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

IND vs ENG: ದ್ವಿತೀಯ ಇನಿಂಗ್ಸ್ ನಲ್ಲಿ ಟೀಂ ಇಂಡಿಯಾಕ್ಕೆ ಇದೆಂಥಾ ಅವಸ್ಥೆ