Select Your Language

Notifications

webdunia
webdunia
webdunia
webdunia

ಗೌತಮ್ ಗಂಭೀರ್ ತಾನಾಗಿಯೇ ಕೋಚ್ ಹುದ್ದೆ ಬಿಟ್ರೆ ಒಳ್ಳೇದು

Gautam Gambhir

Krishnaveni K

ಮ್ಯಾಂಚೆಸ್ಟರ್ , ಶನಿವಾರ, 26 ಜುಲೈ 2025 (10:55 IST)
ಮ್ಯಾಂಚೆಸ್ಟರ್: ಭಾರತ ಮತ್ತು ಇಂಗ್ಲೆಂಡ್ ನಡುವಿನ ಟೆಸ್ಟ್ ಸರಣಿಯಲ್ಲಿ ಭಾರತದ ನಿರಾಶಾದಾಯಕ ಪ್ರದರ್ಶನದಿಂದ ಬೇಸತ್ತ ಫ್ಯಾನ್ಸ್ ಕೋಚ್ ಗೌತಮ್ ಗಂಭೀರ್ ತಾನಾಗಿಯೇ ರಾಜೀನಾಮೆ ಕೊಟ್ಟು ಹೋದ್ರೆ ಒಳ್ಳೆಯದು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮೊದಲ ಎರಡು ಟೆಸ್ಟ್ ಪಂದ್ಯದಲ್ಲಿ ಭಾರತದ ಬ್ಯಾಟಿಂಗ್ ಉತ್ತಮವಾಗಿತ್ತು. ಆದರೆ ಮೊದಲ ಪಂದ್ಯದಲ್ಲಿ ಕೊನೆಯ ದಿನದ ವೈಫಲ್ಯದಿಂದ ಪಂದ್ಯ ಸೋಲುವಂತಾಯಿತು. ಎರಡನೇ ಪಂದ್ಯದಲ್ಲಿ ಗೆದ್ದರೂ ಮೂರನೇ ಪಂದ್ಯದಲ್ಲಿ ಮತ್ತೆ  ಸೋಲು ಕಾಣುವಂತಾಯಿತು. ಇದೀಗ ಸರಣಿಯಲ್ಲಿ 2 ಪಂದ್ಯ ಸೋತಿರುವ ಭಾರತಕ್ಕೆ ಈ ಸರಣಿ ಗೆಲ್ಲಲು ಈ ಪಂದ್ಯವನ್ನು ಗೆಲ್ಲಲೇಬೇಕು.

ಆದರೆ ಸದ್ಯದ ಪರಿಸ್ಥಿತಿ ನೋಡಿದರೆ ಈ ಪಂದ್ಯವೂ ಕೈ ತಪ್ಪಿ ಹೋಗುವ ಹಂತದಲ್ಲಿದೆ. ಇದರಿಂದ ಅಭಿಮಾನಿಗಳು ಭಾರೀ ಸಿಟ್ಟಿಗೆದ್ದಿದ್ದಾರೆ. ಕೋಚ್ ಗೌತಮ್ ಗಂಭೀರ್ ನೇತೃತ್ವದಲ್ಲಿ ಟೀಂ ಇಂಡಿಯಾ ಸತತವಾಗಿ ಟೆಸ್ಟ್ ಸರಣಿಗಳನ್ನು ಸೋಲುತ್ತಲೇ ಇದೆ.

ಈ ಹಿಂದೆ ಆಸ್ಟ್ರೇಲಿಯಾ ವಿರುದ್ಧವೂ ಟೆಸ್ಟ್ ಸರಣಿ ಸೋತಿತ್ತು. ಭಾರತ ಎಂದೂ ಟೆಸ್ಟ್ ಮಾದರಿಯಲ್ಲಿ ಈ ಪರಿ ಸೋತಿರಲಿಲ್ಲ. ಆದರೆ ಈಗ ಸತತ ಸೋಲು ಕಾಣುತ್ತಿರುವುದು ಅಭಿಮಾನಿಗಳ ತಾಳ್ಮೆ ಕೆಡಿಸಿದೆ. ಗೌತಮ್ ಗಂಭೀರ್ ಸೀಮಿತ ಓವರ್ ಗಳ ಪಂದ್ಯಗಳಿಗೆ ಬೆಸ್ಟ್ ಕೋಚ್. ಆದರೆ ಟೆಸ್ಟ್ ಮಾದರಿಗೆ ಅಲ್ಲ. ಹೀಗಾಗಿ ಅವರಾಗಿಯೇ ಟೆಸ್ಟ್ ಕೋಚಿಂಗ್ ಗೆ ರಾಜೀನಾಮೆ ಕೊಟ್ಟು ಹೋದರೆ ಒಳ್ಳೆಯದು ಎಂದು ಅಭಿಮಾನಿಗಳು ಆಗ್ರಹಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಮಹಿಳಾ ಚೆಸ್ ವಿಶ್ವಕಪ್ ಫೈನಲ್‌ಗೆ ದಿವ್ಯಾ ದೇಶಮುಖ್‌, ಕೋನೇರು ಹಂಪಿ: ಯಾರೇ ಗೆದ್ದರೂ ಭಾರತಕ್ಕೆ ಕಿರೀಟ