Select Your Language

Notifications

webdunia
webdunia
webdunia
webdunia

Rishabh Pant: ಚೆಂಡು ಬಡಿದ ರಭಸಕ್ಕೆ ರಿಷಭ್ ಪಂತ್ ಪಾದದ ಗತಿ ಏನಾಗಿದೆ ನೋಡಿ: ವಿಡಿಯೋ

Rishabh Pant

Krishnaveni K

ಮ್ಯಾಂಚೆಸ್ಟರ್ , ಗುರುವಾರ, 24 ಜುಲೈ 2025 (09:09 IST)
Photo Credit: X
ಮ್ಯಾಂಚೆಸ್ಟರ್: ಭಾರತ ಮತ್ತು ಇಂಗ್ಲೆಂಡ್ ನಡುವಿನ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಮತ್ತೆ ಟೀಂ ಇಂಡಿಯಾ ವಿಕೆಟ್ ಕೀಪರ್ ಬ್ಯಾಟಿಗ ರಿಷಭ್ ಪಂತ್ ಗಾಯಗೊಂಡಿದ್ದಾರೆ. ಈ ಬಾರಿ ಅವರ ಪಾದಕ್ಕೆ ಚೆಂಡು ಬಡಿದ ಪರಿಣಾಮ ಗಂಭೀರ ಗಾಯಗೊಂಡಿದ್ದಾರೆ. ಈ ವಿಡಿಯೋ ಇಲ್ಲಿದೆ ನೋಡಿ.

ಮೂರನೇ ಟೆಸ್ಟ್ ಪಂದ್ಯದಲ್ಲಿ ಕೈ ಬೆರಳಿಗೆ ಗಾಯ ಮಾಡಿಕೊಂಡು ಇಡೀ ಪಂದ್ಯದಲ್ಲಿ ಕೀಪಿಂಗ್ ಮಾಡಲು ಸಾಧ್ಯವಾಗಿರಲಿಲ್ಲ. ಅದೂ ಮೊದಲ ದಿನವೇ ಘಟನೆ ನಡೆದಿತ್ತು. ಇದೀಗ ನಾಲ್ಕನೇ ದಿನಾಟದಲ್ಲೂ ಮೊದಲ ದಿನವೇ ಗಾಯಗೊಂಡಿದ್ದಾರೆ.

ಈ ಬಾರಿ ಕ್ರಿಸ್ ವೋಕ್ಸ್ ಎಸೆತದಲ್ಲಿ ಚೆಂಡು ಅವರ ಪಾದಕ್ಕೇ ಬಡಿದಿದೆ. ಪರಿಣಾಮ ಪಾದ ಊದಿಕೊಂಡು ರಕ್ತ ಸೋರಿದೆ. ನೋವಿನಿಂದ ಒದ್ದಾಡುತ್ತಿದ್ದ ರಿಷಭ್ ಪಂತ್ ರನ್ನು ಬಳಿಕ ವಾಹನದ ಮೂಲಕ ಅವರನ್ನು ಮೈದಾನದಿಂದ ಹೊರಗೆ ಕರೆದೊಯ್ಯಲಾಯಿತು.

ಈ ವೇಳೆ ಅವರು ತೀವ್ರ ನೋವಿನಿಂದ ಒದ್ದಾಡುತ್ತಿದ್ದರು. ಹೀಗಾಗಿ ಇಂದು ಅವರು ಬ್ಯಾಟಿಂಗ್ ಮಾಡುವುದು ಅನುಮಾನವಾಗಿದೆ. ಉತ್ತಮ ಲಯದಲ್ಲಿದ್ದ ರಿಷಭ್ 37 ರನ್ ಗಳಿಸಿದ್ದರು. ರಿಷಭ್ ಗಾಯಗೊಂಡ ಮೈದಾನ ತೊರೆದ ನಂತರ ರವೀಂದ್ರ ಜಡೇಜಾ ಬ್ಯಾಟಿಂಗ್ ಗಿಳಿಯಬೇಕಾಯಿತು. ನಿನ್ನೆಯ ದಿನದಂತ್ಯಕ್ಕೆ ಭಾರತ 4 ವಿಕೆಟ್ ನಷ್ಟಕ್ಕೆ 264 ರನ್ ಗಳಿಸಿತು. ಸಾಯಿ ಸುದರ್ಶನ್ 61 ರನ್ ಗಳಿಸಿ ಔಟಾಗಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

ಭಾರತ–ಇಂಗ್ಲೆಂಡ್‌ ಟೆಸ್ಟ್‌: ದಾಖಲೆ ಬರೆದ ಕೆಲವೇ ಕ್ಷಣದಲ್ಲಿ ಗಾಯಗೊಂಡ ಮೈದಾನ ತೆರೆದ ರಿಷಭ್‌ ಪಂತ್‌