Select Your Language

Notifications

webdunia
webdunia
webdunia
webdunia

ಭಾರತ–ಇಂಗ್ಲೆಂಡ್‌ ಟೆಸ್ಟ್‌: ದಾಖಲೆ ಬರೆದ ಕೆಲವೇ ಕ್ಷಣದಲ್ಲಿ ಗಾಯಗೊಂಡು ಮೈದಾನ ತೆರೆದ ರಿಷಭ್‌ ಪಂತ್‌

Wicketkeeper Rishabh Pant, India-England Test, Captain Shubman Gill

Sampriya

ಲಂಡನ್‌ , ಬುಧವಾರ, 23 ಜುಲೈ 2025 (22:15 IST)
Photo Credit X
ಲಂಡನ್‌: ಎಡಗೈ ಬ್ಯಾಟರ್‌ ರಿಷಭ್ ಪಂತ್ ಅವರು ಬುಧವಾರ ಇಂಗ್ಲೆಂಡ್‌ನಲ್ಲಿ 1000 ಟೆಸ್ಟ್ ರನ್ ಗಳಿಸಿದ ಮೊದಲ ಪ್ರವಾಸಿ ವಿಕೆಟ್‌ಕೀಪರ್-ಬ್ಯಾಟರ್ ಎಂಬ ದಾಖಲೆ ಬರೆದಿದ್ದಾರೆ.

ಮ್ಯಾಂಚೆಸ್ಟರ್‌ನಲ್ಲಿ ಭಾರತಕ್ಕಾಗಿ ತನ್ನ 13 ನೇ ಟೆಸ್ಟ್ ಆಡುತ್ತಿರುವ ಪಂತ್, ಇಂಗ್ಲೆಂಡ್‌ನಲ್ಲಿ 1000 ಟೆಸ್ಟ್ ರನ್ ಪೂರೈಸಲು ಬುಧವಾರ 19 ರನ್‌ಗಳ ಅಗತ್ಯವಿತ್ತು. ಭಾರತ-ಇಂಗ್ಲೆಂಡ್‌ನ ನಾಲ್ಕನೇ ಟೆಸ್ಟ್‌ನ 61 ನೇ ಓವರ್‌ನ ಮೂರನೇ ಎಸೆತದಲ್ಲಿ ಬ್ರೈಡನ್ ಕಾರ್ಸ್ ಅವರನ್ನು ಸಿಕ್ಸರ್‌ಗೆ ಹೊಡೆಯುವ ಮೂಲಕ ಅವರು ಗುರಿಯನ್ನು ಸಾಧಿಸಿದರು.

2018ರಂದು ನಾಟಿಂಗ್‌ಹ್ಯಾಮ್‌ನಲ್ಲಿ ಇಂಗ್ಲೆಂಡ್ ವಿರುದ್ಧ ಭಾರತಕ್ಕಾಗಿ ಟೆಸ್ಟ್ ಪದಾರ್ಪಣೆ ಮಾಡಿದ ನಂತರ 27 ವರ್ಷದ ಪಂತ್ ಇಂಗ್ಲೆಂಡ್‌ನಲ್ಲಿ ಒಟ್ಟು 13 ಪಂದ್ಯಗಳನ್ನು ಆಡಿದ್ದಾರೆ. 

ಕ್ರಿಸ್ ವೋಕ್ಸ್ ಬೌಲಿಂಗ್‌ ದಾಳಿಯನ್ನು ಎದುರಿಸುತ್ತಿರುವಾಗ ಪಾದದ ಗಾಯಕ್ಕೊಳಗಾದ ರಿಷಭ್‌ ಪಂತ್ ಅವರು ಮೈದಾನವನ್ನು ತೆರೆದರು. ಬಲಗಾಲಿನಲ್ಲಿ ಊತ ಕಾಣಿಸಿಕೊಂಡು ನಿಲ್ಲಲು ಹರಸಾಹಸ ಪಡುತ್ತಿದ್ದರು. ಅವರನ್ನು ಬಂಡಿಯಲ್ಲಿ ಮೈದಾನದಿಂದ ಕರೆದೊಯ್ಯಲಾಯಿತು. ಈ ವೇಳೆಗೆ ಪಂತ್‌ 37 ರನ್‌ ಗಳಿಸಿದ್ದರು.

ಭಾರತ ತಂಡವು 74 ಓವರ್‌ಗಳಲ್ಲಿ ಮೂರು ವಿಕೆಟ್‌ಗೆ 234 ರನ್‌ ಗಳಿಸಿದೆ. ಅರ್ಧಶತಕ ಗಳಿಸಿರುವ ಶಾರ್ದೂಲ್‌ ಠಾಕೂರ್‌ ಮತ್ತು ರವೀಂದ್ರ ಜಡೇಜ ಕ್ರೀಸ್‌ನಲ್ಲಿದ್ದಾರೆ. ಯಶಸ್ವಿ ಜೈಸ್ವಾಲ್‌ (58), ಕೆ.ಎಲ್‌. ರಾಹುಲ್‌ (46), ನಾಯಕ ಶುಭಮನ್‌ ಗಿಲ್‌ (12) ಮತ್ತು ಸಾಯಿ ಸುದರ್ಶನ್‌ (61) ರನ್‌ ಗಳಿಸಿ ಔಟಾಗಿದ್ದಾರೆ.



Share this Story:

Follow Webdunia kannada

ಮುಂದಿನ ಸುದ್ದಿ

IND vs ENG: ಇಂಗ್ಲೆಂಡ್ ನೆಲದಲ್ಲಿ ದಾಖಲೆ ಮಾಡಿದ ಕೆಎಲ್ ರಾಹುಲ್