ಲಂಡನ್: ಭಾರತದ ಪುರುಷ ಮತ್ತು ಮಹಿಳಾ ಕ್ರಿಕೆಟ್ ತಂಡಗಳು ಬ್ರಿಟನ್‌ನ ರಾಜಕುಮಾರ ಮೂರನೇ ಚಾರ್ಲ್ಸ್ ಅವರ ಆಹ್ವಾನದ ಮೇರೆಗೆ ಗಾರ್ಡನ್ಸ್ ಆಫ್ ಕ್ಲಾರೆನ್ಸ್ ಹೌಸ್ಗೆ ಭೇಟಿ ನೀಡಿದ್ದವು. ಈ ಸಂದರ್ಭದಲ್ಲಿ 76 ವರ್ಷದ ಚಾರ್ಲ್ಸ್ ಅವರು ಆಟಗಾರರೊಂದಿಗೆ ಹೆಚ್ಚು ಹೊತ್ತು ಸಂವಾದ ನಡೆಸಿದರು.
ಎರಡೂ ತಂಡಗಳ ಆಟಗಾರರೊಂದಿಗೆ ಚಾರ್ಲ್ಸ್ ಮುಕ್ತವಾಗಿ ಮಾತುಕತೆ ನಡೆಸಿದರು. ಇದೇ ವೇಳೆ ನಾಯಕ ಶುಭಮನ್ ಗಿಲ್ ಅವಲ್ಲಿ, ನಿಮ್ಮ ಕೊನೆಯ ಬ್ಯಾಟರ್ ಮೊಹಮ್ಮದ್ ಸಿರಾಜ್ ಅವರು ಔಟಾಗಿದ್ದು ದುರದೃಷ್ಟಕರ. ಆದರೆ ಆ ಸಂದರ್ಭದಲ್ಲಿ ನಿಮಗೆ ಹೇಗನಿಸಿತು ಎಂದು ಚಾರ್ಲ್ಸ್ ಪ್ರಶ್ನಿಸಿದರು. ಈ ವಿಚಾರವನ್ನು ಗಿಲ್ ಅವರೇ ಹೇಳಿದ್ದಾರೆ.
ಲಾರ್ಡ್ಸ್‌ನಲ್ಲಿ ಭಾರತ ತಂಡವು ಕೇವಲ 22 ರನ್‌ಗಳಿಂದ ಸೋತಿತು. ಕೊನೆಯ ವಿಕೆಟ್ ಜೊತೆಯಾಟದಲ್ಲಿ ರವೀಂದ್ರ ಜಡೇಜ, ಜಸ್‌ಪ್ರೀತ್ ಬೂಮ್ರಾ, ಮೊಹಮ್ಮದ್ ಸಿರಾಜ್ ಅವರ ವಿರೋಚಿತ ಹೋರಾಟದಿಂದಾಗಿ ತಂಡಕ್ಕೆ ಗೆಲುವಿನ ನಿರೀಕ್ಷೆ ಮೂಡಿತ್ತು.
ಚಾರ್ಲ್ಸ್ ಪ್ರಶ್ನೆಗೆ ಉತ್ತರಿಸಿದ ಗಿಲ್, ಅದೊಂದು ದುರದೃಷ್ಟಕರ ಪಂದ್ಯ. ಸರಣಿಯ ಮುಂದಿನ ಎರಡೂ ಪಂದ್ಯಗಳಲ್ಲಿ ಅದೃಷ್ಟ ನಮ್ಮ ಪರವಾಗಿರುವ ನಿರೀಕ್ಷೆ ಇದೆ ಎಂದೆವು. ಅವರೊಂದಿಗೆ ಇನ್ನೂ ಬಹಳಷ್ಟು ಅರ್ಥಪೂರ್ಣ ಮಾತುಕತೆಗಳನ್ನು ಮಾಡಿದೆವು
ಆದರೆ, ಇಂಗ್ಲೆಂಡ್ ಆಫ್‌ಸ್ಪಿನ್ನರ್ ಶೋಯಬ್ ಬಶೀರ್ ಅವರ ಎಸೆತವನ್ನು ಸಿರಾಜ್ ರಕ್ಷಣಾತ್ಮಕವಾಗಿ ಆಡಿದರು. ಚೆಂಡು ನೆಲದ ಮೇಲೆ ನಿಧಾನವಾಗಿ ಉರುಳುತ್ತಾ ಹೋಗಿ ಸ್ಟಂಪ್‌ಗೆ ಬಡಿದು ಬೇಲ್ಸ್ ಉರುಳಿದವು. ಅದರೊಂದಿಗೆ ಭಾರತಕ್ಕೆ ಸೋಲಿನ ನಿರಾಸೆ ಕಾಡಿತ್ತು.