Select Your Language

Notifications

webdunia
webdunia
webdunia
webdunia

ಶುಭಮನ್‌ ಗಿಲ್‌ ಡಬಲ್‌ ಸೆಂಚುರಿ ಬೆನ್ನಲ್ಲೇ ಆಂಗ್ಲರ ಗಾಯಕ್ಕೆ ಉಪ್ಪು ಸವರಿದ ಆಕಾಶ್‌ ದೀಪ್‌: ಭಾರತಕ್ಕೆ ಬೃಹತ್‌ ಮುನ್ನಡೆ

India-England Test, Captain Shubman Gill, Bowler Akash Deep

Sampriya

ಲಂಡನ್‌ , ಶುಕ್ರವಾರ, 4 ಜುಲೈ 2025 (00:05 IST)
Photo Credit X
ಲಂಡನ್‌: ಇಂಗ್ಲೆಂಡ್‌ ವಿರುದ್ಧದ ಮೊದಲ ಟೆಸ್ಟ್‌ನಲ್ಲಿ ಸೋಲು ಕಂಡ ಭಾರತ ತಂಡವು ಎರಡನೇ ಟೆಸ್ಟ್‌ನಲ್ಲಿ ಎಚ್ಚರಿಕೆಯ ಆಟ ಪ್ರದರ್ಶಿಸಿ ಎರಡನೇ ದಿನ ಭಾರತ  ಹಿಡಿತ ಸಾಧಿಸಿದೆ. 

ನಾಯಕ ಶುಭಮನ್‌ ಗಿಲ್‌  ಅವರ ಅಮೋಘ ದ್ವಿಶತಕದ ನೆರವಿನಿಂದ ಭಾರತ 51 ಓವರ್‌ಗಳಲ್ಲಿ  587 ರನ್‌ ಕಲೆ ಹಾಕಿದೆ. ಇದಕ್ಕೆ ಉತ್ತರವಾಗಿ ಇನಿಂಗ್ಸ್‌ ಆರಂಭಿಸಿದ ಇಂಗ್ಲೆಂಡ್‌ ಎರಡನೇ ದಿನದ ಅಂತ್ಯಕ್ಕೆ ಇಂಗ್ಲೆಂಡ್‌ 20 ಓವರ್‌ಗಳಲ್ಲಿ 3 ವಿಕೆಟ್‌ ನಷ್ಟಕ್ಕೆ 77 ರನ್‌ ಗಳಿಸಿದ್ದು, 510 ರನ್‌ಗಳ ಹಿನ್ನಡೆಯಲ್ಲಿದೆ.

ಇನ್ನಿಂಗ್ಸ್‌ ಆರಂಭಿಸಿದ ಇಂಗ್ಲೆಂಡ್‌ ಪರ ಆರಂಭಿಕ ಆಟಗಾರ ಬೆನ್ ಡಕೆಟ್‌ ಮತ್ತು ಓಲಿ ಪೋಪ್ ಶೂನ್ಯಕ್ಕೆ ಔಟಾದರು. ಆಕಾಶ್‌ ದೀಪ್‌ ಅವರು ಸತತ ಎರಡು ಎಸೆತಗಳಲ್ಲಿ ಇಬ್ಬರನ್ನು ಔಟ್‌ ಮಾಡಿದರು. 19 ರನ್‌ ಗಳಿಸಿದ್ದ ಜ್ಯಾಕ್ ಕ್ರಾಲಿ ಔಟಾದಾಗ ಇಂಗ್ಲೆಂಡ್‌ 3 ವಿಕೆಟ್‌ ನಷ್ಟಕ್ಕೆ 25 ರನ್‌ ಗಳಿಸಿ ಸಂಕಷ್ಟಕ್ಕೆ ಸಿಲುಕಿತು. ಈ ಸಂದರ್ಭದಲ್ಲಿ ಜೊತೆಯಾದ ಜೋ ರೂಟ್‌ ಮತ್ತು ಹ್ಯಾರಿ ಬ್ರೂಕ್‌ ಮುರಿಯದ 4ನೇ ವಿಕೆಟಿಗೆ 81 ಎಸೆತಗಳಲ್ಲಿ 52 ರನ್‌ ಜೊತೆಯಾಟವಾಡಿ ತಂಡವನ್ನು ಮೇಲಕ್ಕೆ ಎತ್ತಿದರು. ಜೋ ರೂಟ್‌ ಔಟಾಗದೇ 18 ರನ್‌, ಹ್ಯಾರಿ ಬ್ರೂಕ್‌ ಔಟಾಗದೇ 30 ರನ್‌ ಹೊಡೆದು ಬ್ಯಾಟಿಂಗ್‌ ಕಾಯ್ದುಕೊಂಡಿದ್ದಾರೆ.

ಇದಕ್ಕೂ ಮೊದಲು ಬ್ಯಾಟ್‌ ಬೀಸಿದ ಭಾರತ ಇಂದು ಬುಧವಾರದ ಮೊತ್ತಕ್ಕೆ 277 ರನ್‌ ಸೇರಿಸಿ ಅಂತಿಮವಾಗಿ 587 ರನ್‌ಗಳಿಗೆ ಸರ್ವಪತನ ಕಂಡಿತು. 114 ರನ್‌ ಗಳಿಸಿದ್ದ ಶುಭಮನ್‌ ಗಿಲ್‌ ಇಂದು 269 ರನ್‌(387 ಎಸೆತ, 30 ಬೌಂಡರಿ, 3 ಸಿಕ್ಸ್‌) ಸಿಡಿಸಿ ಔಟಾದರೆ 41 ರನ್‌ ಗಳಿಸಿದ್ದ ರವೀಂದ್ರ ಜಡೇಜ 89 ರನ್‌(137 ಎಸೆತ, 10 ಬೌಂಡರಿ, 1 ಸಿಕ್ಸ್‌) ಸಿಡಿಸಿ ವಿಕೆಟ್‌ ಒಪ್ಪಿಸಿದರು. ಇವರಿಬ್ಬರು 6ನೇ ವಿಕೆಟಿಗೆ 279 ಎಸೆತಗಳಲ್ಲಿ 203 ರನ್‌ ಜೊತೆಯಾಟವಾಡಿ ತಂಡದ ಮೊತ್ತವನ್ನು 400 ರನ್‌ಗಳ ಗಡಿ ದಾಟಿಸಿದರು.  ನಂತರ ಗಿಲ್‌ ಅವರನ್ನು ‌ವಾಷಿಂಗ್ಟನ್‌ ಸುಂದರ್‌ 42 ರನ್‌(103 ಎಸೆತ, 3 ಬೌಂಡರಿ, 1 ಸಿಕ್ಸ್‌) ಸೇರಿಕೊಂಡರು. ಗಿಲ್‌ ಮತ್ತು ಸುಂದರ್‌ 189 ಎಸೆತಗಳಲ್ಲಿ 144 ರನ್‌ ಜೊತೆಯಾಟವಾಡಿದರು. 

ಶುಭಮನ್ ಗಿಲ್ ಗಳಿಸಿದ 269 ರನ್‌ ಭಾರತೀಯ ನಾಯಕನೊಬ್ಬ ಟೆಸ್ಟ್‌ನಲ್ಲಿ ಗಳಿಸಿದ ಅತ್ಯಧಿಕ ರನ್‌ ಆಗಿದೆ. 2019 ರಲ್ಲಿ ಪುಣೆಯಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ವಿರಾಟ್ ಕೊಹ್ಲಿ ಗಳಿಸಿದ ಅಜೇಯ 254 ರನ್‌ ಇಲ್ಲಿಯವರೆಗೆ ನಾಯಕನೊಬ್ಬ ಅತ್ಯದಿಕ ರನ್‌ ಆಗಿತ್ತು. ಏಷ್ಯಾದ ಹೊರಗೆ ಟೆಸ್ಟ್‌ನಲ್ಲಿ ಭಾರತೀಯ ಬ್ಯಾಟ್ಸ್‌ಮನ್ ಗಳಿಸಿದ ಅತ್ಯಧಿಕ ರನ್‌ಗಳಾಗಿವೆ. ಈ ಹಿಂದೆ 2004 ರಲ್ಲಿ ಸಿಡ್ನಿಯಲ್ಲಿ ಆಸ್ಟ್ರೇಲಿಯಾ ವಿರುದ್ಧ ಸಚಿನ್‌ ತೆಂಡೂಲ್ಕರ್‌ ಅಜೇಯ 241 ರನ್‌ ಹೊಡೆದಿದ್ದರು.

  

Share this Story:

Follow Webdunia kannada

ಮುಂದಿನ ಸುದ್ದಿ

IND vs ENG: ತಪ್ಪು ತಿದ್ದಿಕೊಂಡು ಮೊದಲ ಇನಿಂಗ್ಸ್ ನಲ್ಲಿ ದೊಡ್ಡ ಮೊತ್ತ ಪೇರಿಸಿದ ಟೀಂ ಇಂಡಿಯಾ