Select Your Language

Notifications

webdunia
webdunia
webdunia
webdunia

ಭುಜಬಲದ ಪರಾಕ್ರಮ ಮೆರೆದ ಮೊಹಮ್ಮದ್‌ ಸಿರಾಜ್‌ಗೆ ಐಸಿಸಿ ಶಾಕ್‌: ನಿಷೇಧದ ಭೀತಿಯಲ್ಲಿ ಭಾರತದ ವೇಗಿ

Bowler Mohammad Siraj, India-England Test, International Cricket Council

Sampriya

ಲಂಡನ್‌ , ಸೋಮವಾರ, 14 ಜುಲೈ 2025 (17:42 IST)
Photo Credit X
ಲಂಡನ್‌: ಲಾರ್ಡ್ಸ್​​ ಮೈದಾನದಲ್ಲಿ ನಡೆಯುತ್ತಿರುವ ಇಂಗ್ಲೆಂಡ್​ ನಡುವಿನ ಮೂರನೇ ಟೆಸ್ಟ್‌ನಲ್ಲಿ ಭಾರತ ಸೋಲಿನತ್ತ ಸಾಗಿದೆ. ಎಂಟು ವಿಕೆಟ್‌ ಕಳೆದುಕೊಂಡಿರುವ ಭಾರತದ ಗೆಲುವಿಗೆ 81 ರನ್‌ ಅಗತ್ಯವಿದೆ. ಈ ಮಧ್ಯೆ ಮೊಹಮ್ಮದ್ ಸಿರಾಜ್‌ಗೆ ಐಸಿಸಿ ಶಾಕ್‌ ನೀಡಿದೆ.

ಈ ಟೆಸ್ಟ್ ಪಂದ್ಯದ ಮೂರನೇ ದಿನದಾಟದಲ್ಲಿ ಬೌಲಿಂಗ್ ಮಾಡುವ ವೇಳೆ ಮೊಹಮ್ಮದ್ ಸಿರಾಜ್, ಐಸಿಸಿ ನಿಯಮಕ್ಕೆ ವಿರುದ್ಧವಾಗಿ ನಡೆದುಕೊಂಡಿದ್ದರು. ಇಂಗ್ಲೆಂಡ್‌ ಆರಂಭಿಕ ಆಟಗಾರ ಬೆನ್ ಡಕೆಟ್ ವಿಕೆಟ್ ಉರಳಿಸಿದ್ದ ಸಿರಾಜ್, ಅವರ ಬಳಿ ಹೋಗಿ ಆಕ್ರಮಣಕಾರಿಯಾಗಿ ಸಂಭ್ರಮಾಚರಿಸಿದ್ದರು. ಈ ವೇಳೆ ಅವರ ಭುಜಕ್ಕೆ ತಮ್ಮ ಭುಜ ತಾಗಿಸಿದ್ದರು. ಹೀಗಾಗಿ ಸಿರಾಜ್ ಐಸಿಸಿ ನೀತಿ ಸಂಹಿತೆಯ ಸೆಕ್ಷನ್ 2.5 ರ ಅಡಿಯಲ್ಲಿ ತಪ್ಪಿತಸ್ಥರೆಂದು ಪರಿಗಣಿಸಲಾಗಿದ್ದು, ದಂಡ ವಿಧಿಸಲಾಗಿದೆ.

ಪಂದ್ಯ ಶುಲ್ಕದ ಶೇ.15ರಷ್ಟು ದಂಡವನ್ನು ಸಿರಾಜ್​ಗೆ ವಿಧಿಸಿದೆ. ಇದರೊಟ್ಟಿಗೆ ಒಂದು ಡಿಮೆರಿಟ್ ಪಾಯಿಂಟ್ ಕೂಡ ಸೇರಿಸಿದೆ. ಲಾರ್ಡ್ಸ್​ನಲ್ಲಿ ಇಂಗ್ಲೆಂಡ್ ವಿರುದ್ಧದ ಮೂರನೇ ಟೆಸ್ಟ್ ಪಂದ್ಯದ ನಾಲ್ಕನೇ ದಿನದಂದು ಐಸಿಸಿ ನೀತಿ ಸಂಹಿತೆಯನ್ನು ಉಲ್ಲಂಘಿಸಿದ್ದಕ್ಕಾಗಿ ಸಿರಾಜ್​ಗೆ ದಂಡ ವಿಧಿಸಲಾಗಿದೆ.  

ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಇಂಗ್ಲೆಂಡ್ ಮೊದಲ ಇನ್ನಿಂಗ್ಸ್​ನಲ್ಲಿ 387 ರನ್ ಕಲೆಹಾಕಿತು. ಬಳಿಕ ಬ್ಯಾಟ್ ಮಾಡಿದ ಭಾರತ ಕೂಡ ತನ್ನ ಮೊದಲ ಇನ್ನಿಂಗ್ಸ್​ನಲ್ಲಿ 387 ರನ್ ಗಳಿಸಿತು. 

ಎರಡನೇ ಇನ್ನಿಂಗ್ಸ್​ನಲ್ಲಿ ಮೊಹಮ್ಮದ್ ಸಿರಾಜ್ ಬೌಲಿಂಗ್​ನಲ್ಲಿ ಜಸ್ಪ್ರೀತ್ ಬುಮ್ರಾಗೆ ಕ್ಯಾಚ್ ನೀಡಿದ ಬೆನ್ ಡಕೆಟ್​ (12) ಔಟಾದರು. ಡಕೆಟ್​ ಪೆವಿಲಿಯನ್​ಗೆ ಹೋಗುತ್ತಿದ್ದಂತೆ ತಮ್ಮದೇ ಶೈಲಿಯಲ್ಲಿ ಸಂಭ್ರಮಿಸಿದ ಸಿರಾಜ್, ಈ ವಿಷಯದಲ್ಲಿ ಐಸಿಸಿ ನೀತಿ ಸಂಹಿತೆಗೆ ವಿರುದ್ಧವಾಗಿ ನಡೆದುಕೊಂಡರು. ಇದೇ ಅವರ ದಂಡಕ್ಕೆ ಕಾರಣವಾಗಿದೆ.

 ಕಳೆದ 24 ತಿಂಗಳಲ್ಲಿ ಇದು ಸಿರಾಜ್ ಮಾಡಿದ ಎರಡನೇ ತಪ್ಪಾಗಿದ್ದು, ಸಿರಾಜ್​ಗೆ ಒಂದು ಪಂದ್ಯದಿಂದ ನಿಷೇಧಕ್ಕೊಳಗಾಗುವ ಭೀತಿ ಎದುರಾಗಿದೆ. 

Share this Story:

Follow Webdunia kannada

ಮುಂದಿನ ಸುದ್ದಿ

ಬ್ಯಾಡ್ಮಿಂಟನ್ ತಾರೆ ಸೈನಾ ನೆಹ್ವಾಲ್, ಕಶ್ಯಪ್ ದಾಂಪತ್ಯದಲ್ಲಿ ಬಿರುಕು